ಮಧ್ಯಪ್ರದೇಶ : ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್(GAIL) ಬಾಟ್ಲಿಂಗ್ ಸ್ಥಾವರದಲ್ಲಿ ಭಾರೀ ದುರಂತ ಸಂಭವಿಸಿದ್ದು, ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಗ್ಯಾಸ್ ಬಾಟ್ಲಿಂಗ್ ಪ್ಲಾಂಟ್ನಲ್ಲಿ ಟ್ಯಾಂಕ್ ಒಳಗೆ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ಉಜ್ಜಯಿನಿಯ ಘಟ್ಟಿಯಾ ತಹಸಿಲ್ನಲ್ಲಿ ಈ ಅವಘಡ ಸಂಭವಿಸಿದೆ. ಮೃತ ದುರ್ದೈವಿಗಳನ್ನು ರಾಜೇಂದ್ರ ಸಿಂಗ್(30) ಮತ್ತು ಲಖನ್ ಸಿಂಗ್(27) ಎಂದು ಗುರುತಿಸಲಾಗಿದೆ.
ಗ್ಯಾಸ್ ಟ್ಯಾಂಕ್ ಖಾಲಿ ಮಾಡಲಾಗುತ್ತಿದ್ದು, ಪ್ರಕ್ರಿಯೆ ಪೂರ್ಣಗೊಂಡ ನಂತರ ಅವರ ಮೃತದೇಹಗಳನ್ನು ಹೊರತೆಗೆಯಗುತ್ತದೆ. ನಿರ್ಲಕ್ಷ್ಯದಿಂದ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ(ಎಸ್ಡಿಒಪಿ) ಆರ್.ಕೆ. ರಾಯ್ ತಿಳಿಸಿದ್ದಾರೆ.