ತಾಂತ್ರಿಕ ಕಾರಣಗಳಿಂದ ನಿನ್ನೆ ಬಿಡುಗಡೆಯಾಗಬೇಕಿದ್ದ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ಇಂದು ಬಿಡುಗಡೆಯಾಗಿದೆ.
ಜಾಕ್ ಮಂಜು ಮತ್ತು ಗಂಗಾಧರ್ ಸಾರಥ್ಯದಲ್ಲಿ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಬೆಳಗ್ಗೆ 7 ಗಂಟೆಗೆ ಶೋ ಶುರುವಾಗಿದ್ದು, ಬೆಳಗ್ಗೆ, ಥಿಯೇಟರ್ ಗಳ ಬಳಿ ಸುದೀಪ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.