ಕೊಚ್ಚಿ: ಖ್ಯಾತ ಮಲಯಾಳಂ ಚಲನಚಿತ್ರ ಮತ್ತು ಟಿವಿ ಧಾರವಾಹಿ ತಾರೆ ರೆಂಜೂಷಾ ಮೆನನ್ (35) ಅವರು ಸೋಮವಾರ ತಿರುವನಂತಪುರಂನಲ್ಲಿರುವ ತಮ್ಮ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಟಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದರು. ಸಾವಿನ ಕುರಿತು ಶ್ರೀಕರಿಯಂ ಪೊಲೀಸರುತನಿಖೆ ಆರಂಭಿಸಿದ್ದಾರೆ.
ಸೋಮವಾರ ಬೆಳಗ್ಗೆ ಆಕೆ ತಮ್ಮ ಕೋಣೆಯಿಂದ ಹೊರಬರದ ಕಾರಣ ಮನೆ ಮಂದಿ ದಿಗಿಲುಗೊಂಡರು. ಬಳಿಕ ಬಾಗಿಲು ಮುರಿದು ಒಳ ಹೋದ ವೇಳೆ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೆಂಜೂಷಾ ಮೆನನ್ ಅವರು ಹಲವಾರು ಧಾರವಾಹಿಗಳಲ್ಲಿ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಪ್ರಸಿದ್ದರಾಗಿದ್ದರು.