ಕೊಚ್ಚಿ: ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿದ್ದ ಕೇರಳ ಬಾಂಬ್ ಸ್ಫೋಟ ನಡೆಸಿದ್ದ ಆರೋಪಿ ಡೊಮಿನಿಕ್ ಮಾರ್ಟಿನ್ ಮನೆಯಲ್ಲಿಯೇ ಇಂಟರ್ ನೆಟ್ ನೋಡಿ ಬಾಂಬ್ ತಯಾರಿ ವಿಧಾನವನ್ನು ಕಲಿತುಕೊಂಡಿದ್ದ. ಅಲ್ಲದೆ ಈತ ತಂತ್ರಜ್ಞಾನದ ಅರಿವು ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿಯೇ ಇಂಟರ್ ನೋಡಿ ಬಾಂಬ್ ತಯಾರಿ ಬಗ್ಗೆ ಕಲಿತುಕೊಂಡಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈತನ ಯೂಟ್ಯೂಬ್ ಖಾತೆಯನ್ನು ಪೊಲೀಸರು ಇದೀಗ ಪರಿಶೀಲನೆ ನಡೆಸಿದ್ದಾರೆ. ಈ ಮೊದಲು ಟಿಫನ್ ಬಾಕ್ಸ್ ನಲ್ಲಿ ಬಾಂಬ್ ಇತ್ತು ಎಂದು ತನಿಖಾ ಏಜನ್ಸಿಗಳು ಹೇಳಿದ್ದವು. ಆದರೆ ಇದೀಗ ಟಿಫಿನ್ ಬಾಕ್ಸ್ ನಲ್ಲಿ ಬಾಂಬ್ ಇಡದೇ ಆರು ಪ್ಲಾಸ್ಟಿಕ್ ಕವರ್ಗಳಲ್ಲಿ ಬಾಂಬ್ ಇಡಲಾಗಿತ್ತು ಎಂಬುದು ತಿಳಿದುಬಂದಿದೆ.
ಪೆಟ್ರೋಲ್ ತುಂಬಿದ ಪ್ಲಾಸ್ಟಿಕ್ ಚೀಲಕ್ಕೆ ರಿಮೋಟ್ ಜೋಡಿಸಲಾಗಿತ್ತು. ಬ್ಯಾಟರಿಗೆ ಜೋಡಿಸಲಾದ ಗನ್ ಕಿಡಿಯನ್ನು ಸೃಷ್ಟಿಸಿದ್ದು, ನಂತರ ಸ್ಫೋಟಗೊಂಡಿತ್ತು. ಇದಕ್ಕಾಗಿ ಎಂಟು ಲೀಟರ್ ಪೆಟ್ರೋಲ್ ಬಳಸಲಾಗಿದೆ. ಸ್ಫೋಟಕ್ಕಾಗಿ 50 ಶೆಲ್ಗಳನ್ನು ಸ್ಫೋಟಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.