ಲಕ್ನೋ: ಭಾನುವಾರ ಲಕ್ನೋದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಿತು. ಪಂದ್ಯದಲ್ಲಿ ಟಾಸ್ ಸೋತು ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಭರವಸೆ ಆಟಗಾರನಾದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. 9 ಬಾಲ್ಗಳನ್ನು ಆಡಿದ ಕೊಹ್ಲಿ ಒಂದು ರನ್ ಕೂಡ ಕಲೆಹಾಕಲಾಗದೇ ಶೂನ್ಯಕ್ಕೆ ಔಟ್ ಆಗಿ ನಿರ್ಗಮಿಸಿದರು. ಕೊಹ್ಲಿ ಡಕೌಟ್ ಅನ್ನು ಇಂಗ್ಲೆಂಡ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.
ಇಂಗ್ಲೆಂಡ್ಸ್ ಬರ್ಮಿ ಆರ್ಮಿ ತನ್ನ ಎಕ್ಸ್ ಖಾತೆಯಲ್ಲಿ, ನೀರಿನಲ್ಲಿ ಈಜುತ್ತಿದ್ದ ಎರಡು ಬಾತುಕೋಳಿಗಳ ಪೈಕಿ ಒಂದರ ತಲೆಗೆ ವಿರಾಟ್ ಕೊಹ್ಲಿ ಚಿತ್ರವನ್ನು ಹಾಕಿದ್ದ ಎಡಿಟ್ ಫೋಟೊ ಹಾಕಿ ಪೋಸ್ಟ್ ಮಾಡಿತ್ತು. ಆ ಫೋಟೊಗೆ ‘ಬೆಳಗ್ಗೆ ವಾಕ್ಗೆ ಹೊರಟಾಗ’ ಎಂದು ಶೀರ್ಷಿಕೆ ನೀಡಿತ್ತು. ಇದಕ್ಕೆ ಭಾರತದ ಕ್ರಿಕೆಟ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಅಲ್ಲದೇ ಭಾರತದ ಫ್ಯಾನ್ಸ್, ಇಂಗ್ಲೆಂಡ್ ಫ್ಯಾನ್ಸ್ಗೆ ಬಿಸಿ ಮುಟ್ಟಿಸಿದ್ದಾರೆ.
Just give us some time to make the edits. @TheBarmyArmy https://t.co/G0P54UrpRB pic.twitter.com/qBZDz1E04Z
— The Bharat Army (@thebharatarmy) October 29, 2023
ಅದೇ ಬಾತುಕೋಳಿಗಳ ಫೋಟೊಗೆ ಇಂಗ್ಲೆಂಡ್ ಆಟಗಾರರಾದ ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ತಲೆ ಸೇರಿಸಿ ಇಂಗ್ಲೆಂಡ್ ಫ್ಯಾನ್ಸ್ಗೆ ದಿ ಭಾರತ್ ಆರ್ಮಿ ಕೌಂಟರ್ ಕೊಟ್ಟಿದೆ. ಜೋ ರೂಟ್ ಇರುವ ಫೋಟೊಗೆ ‘ಸಂಜೆ ವೇಳೆ ವಾಕ್ಗೆ ಹೊರಟಾಗ’ ಎಂದು ಶೀರ್ಷಿಕೆ ಕೊಟ್ಟಿದೆ. ಅಲ್ಲದೇ ಬೆನ್ ಸ್ಟೋಕ್ಸ್ ಇರುವ ಫೋಟೊಗೆ ‘ಎಡಿಟ್ ಮಾಡಲು ನಮಗೆ ಸ್ವಲ್ಪ ಸಮಯ ಕೊಡಿ’ ಎಂದು ಶೀರ್ಷಿಕೆ ಕೊಟ್ಟು ಠಕ್ಕರ್ ಕೊಟ್ಟಿದೆ. ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಕೂಡ ಶೂನ್ಯಕ್ಕೆ ಔಟ್ ಆಗಿ ನಿರ್ಗಮಿಸಿದ್ದರು. ಹೀಗಾಗಿ ಇಂಗ್ಲೆಂಡ್ನ ಒಂದು ಕೌಂಟರ್ಗೆ ಭಾರತದ ಫ್ಯಾನ್ಸ್ ಎರಡು ಠಕ್ಕರ್ ಕೊಟ್ಟಿದ್ದಾರೆ.