Categories: ಕೇರಳ

ಕೇರಳ ಪ್ರವಾಸಿ ದೋಣಿ ಮುಳುಗಿ ದುರಂತ ಸಾವಿನ ಸಂಖ್ಯೆ 22ಕ್ಕೆ ಏರಿಕೆ

ತಿರುವನಂತಪುರಂ: ಕೇರಳದ ಮಲಪ್ಪುರಂ ಪ್ರವಾಸಿ ದೋಣಿ ಮುಳುಗಿದ ಘಟನೆಯಲ್ಲಿ ಸೋಮವಾರ ಸಾವಿನ ಸಂಖ್ಯೆ 22 ಕ್ಕೆ ಏರಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಬೋಟ್ ಮಾಲೀಕ ನಾಸರ್ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಅಧಿಕ ಸಂಖ್ಯೆಯ ಜನರು ದೋಣಿ ಏರಿರುವುದು ದುರಂತಕ್ಕೆ ಕಾರಣ ಎನ್ನಲಾಗಿದೆ. ಮಕ್ಕಳನ್ನು ಹೊರತುಪಡಿಸಿ 40 ಮಂದಿಗೆ ದೋಣಿ ಏರಲು ಟಿಕೆಟ್ ನೀಡಲಾಗಿತ್ತು.

ಅಧಿಕಾರಿಗಳ ಪ್ರಕಾರ, ಪ್ರಸ್ತುತ 10 ಜನರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಈ ಪೈಕಿ ಮಕ್ಕಳು ಸೇರಿದ್ದಾರೆ, ಆದರೆ ದೋಣಿ ಮುಳುಗಿದ ನಂತರ ಸುಮಾರು 12 ಜನರನ್ನು ರಕ್ಷಿಸಲಾಗಿದೆ. ರಾಜ್ಯ ಸರ್ಕಾರವು ಶೋಕಾಚರಣೆಯ ದಿನವನ್ನು ಘೋಷಿಸಿದೆ. ದಿನದ ಪಟ್ಟಿಯಲ್ಲಿರುವ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ದೋಣಿಯ ಪರವಾನಗಿಯನ್ನು ಇತ್ತೀಚೆಗೆ ರದ್ದುಗೊಳಿಸಲಾಗಿತ್ತು. ಕೆಲ ದಿನಗಳ ಬಳಿಕ ಪರವಾನಗಿ ಮರು ಪರವಾನಗಿ ನೀಡಲಾಗಿದೆ. ಭದ್ರತಾ ಪ್ರೊಟೋಕಾಲ್‌ಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ಬೆಳಗ್ಗೆ ಅಪಘಾತ ಸ್ಥಳಕ್ಕೆ ಆಗಮಿಸಿದ ರಾಜ್ಯ ಕಂದಾಯ ಸಚಿವ ಕೆ.ರಾಜಣ್ಣ, ಸಿಎಂ ವಿಜಯನ್ ಆಗಮಿಸಿದ್ದಾರೆ.

“22 ಸಾವುಗಳು ಸಂಭವಿಸಿವೆ, 10 ಜನರು ಆಸ್ಪತ್ರೆಗಳಲ್ಲಿದ್ದಾರೆ, ಐವರು ದಡಕ್ಕೆ ಈಜಿದರು. ದೋಣಿ ಖಾಸಗಿಯದ್ದಾಗಿದ್ದು, ಪ್ರಯಾಣಿಕರ ನಿಖರ ಸಂಖ್ಯೆ ಸ್ಪಷ್ಟವಾಗಿಲ್ಲ. ಏಳು ತಂಡಗಳು ನೀರಿನಲ್ಲಿ ಶೋಧ ನಡೆಸುತ್ತಿವೆ. ಸಂತ್ರಸ್ತ ಕುಟುಂಬಗಳ ಜೊತೆ ಸರ್ಕಾರವಿದೆ’ ಎಂದು ರಾಜನ್ ತಿಳಿಸಿದ್ದಾರೆ.

Umesha HS

Recent Posts

ಏಷ್ಯನ್​ ಕಿರಿಯರ ಅಥ್ಲೆಟಿಕ್ಸ್​ನಲ್ಲಿ ಕರ್ನಾಟಕದ ಶ್ರೀಯಾ ರಾಜೇಶ್​ಗೆ ಪದಕ

ಕರ್ನಾಟಕದ ಯುವ ಅಥ್ಲೀಟ್​ ಶ್ರೀಯಾ ರಾಜೇಶ್​ ದುಬೈನಲ್ಲಿ ನಡೆಯುತ್ತಿರುವ ಏಷ್ಯನ್​ 20 ವಯೋಮಿತಿಯ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನ ಮೂರನೇ ದಿನವಾದ ಶುಕ್ರವಾರ…

3 mins ago

ದುಡ್ಡು ಉಳಿಸಲು ಬಾಲ್ಯ ವಿವಾಹ; ಮಾಂಗಲ್ಯ ಧಾರಣೆ ವೇಳೆಗೆ ಅಧಿಕಾರಿಗಳ ಎಂಟ್ರಿ

ಬಾಲ್ಯ ವಿವಾಹ ಅಪರಾಧ ಎಂದು ನಿರಂತರ ಜಾಗೃತಿ ಮಾಡಲಾಗುತ್ತಿದೆ. ಆದ್ರೆ, ಇನ್ನು ಬಾಲ್ಯ ವಿವಾಹ ಎನ್ನುವ ಅನಿಷ್ಠ ಪದ್ಧತಿ ಮಾತ್ರ…

8 hours ago

ಮನಮೋಹನ್ ಸಿಂಗ್​ರ ಮತ್ತೊಂದು ವಿಡಿಯೋ ಬಗ್ಗೆ ಪ್ರಧಾನಿ ಮೋದಿ ಕಿಡಿ

ಇತ್ತೀಚೆಗೆ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ, ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವಿದ್ದಾಗ ದೇಶದ…

8 hours ago

ದ.ಕನ್ನಡ ಜಿಲ್ಲೆಯಲ್ಲಿ ಮತದಾನ ಹಕ್ಕು ಕಳೆದುಕೊಂಡ ಯುವತಿ; ಯಾಕೆ ಗೊತ್ತ ?

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯುವತಿಯೊಬ್ಬಳು ಮತದಾನದ ಹಕ್ಕು ಕಳೆದುಕೊಂಡಿದ್ದಾಳೆ. ಸಮಯ ಮೀರಿದ ಬಳಿಕ ಮತದಾನ ಕೇಂದ್ರಕ್ಕೆ ಬಂದು ಯುವತಿ ಮತದಾನದ ಹಕ್ಕು…

9 hours ago

ಮದುವೆ ಸಂಭ್ರಮ ಮುಗಿಸಿ ಕುಟುಂಬ ಸಮೇತ ಬಂದು ಮತ ಚಲಾಯಿಸಿದ ಮದುಮಗ

 ಮದುವೆ ಸಂಭ್ರಮ ಮುಗಿಸಿ ಮಂಗಳೂರಿಗೆ ಆಗಮಿಸಿ ಮತದಾನ ಮಾಡುವ ಮೂಲಕ ಮದುಮಗನೊಬ್ಬ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮಂಗಳೂರು ಹಂಪನಕಟ್ಟೆಯ ಗಣಪತಿ ಹೈಸ್ಕೂಲಿನ…

9 hours ago

ವೋಟಿಂಗ್ ದಿನವೇ ಸಂಸದ ತೇಜಸ್ವಿ ಸೂರ್ಯ ಯಡವಟ್ಟು; ಕೇಸ್ ದಾಖಲು

ರಾಜ್ಯದ 14 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಇಂದಿನ ದಿನವೂ ಬಿರುಸಿನ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಬೆಂಗಳೂರು ದಕ್ಷಿಣ…

9 hours ago