Categories: ಕೇರಳ

ರಾಹುಲ್ ನೆಹರೂ ಕುಟುಂಬದಲ್ಲಿ ಹುಟ್ಟಿದ್ದಾರಾ ಎಂಬುದು ಅನುಮಾನ: ಅನ್ವರ್

ತಿರುವನಂತಪುರಂ: ರಾಹುಲ್ ಗಾಂಧಿ ನೆಹರೂ ಕುಟುಂಬದಲ್ಲಿ ಜನಿಸಿದ್ದಾರಾ ಎಂಬುದರ ಬಗ್ಗೆ ನನಗೆ ಅನುಮಾನವಿದೆ ಹೀಗಾಗಿ ಅವರ ಡಿಎನ್ಎ ಪರೀಕ್ಷಿಸಬೇಕು ಎಂದು ಸಿಪಿಎಂ ಬೆಂಬಲಿತ ಪಕ್ಷೇತರ ಶಾಸಕ ಅನ್ವರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಲಪ್ಪುರಂನ ಪಕ್ಷದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅನ್ವರ್, ರಾಹುಲ್ ಅವರಿಗೆ ಗಾಂಧಿ ಹೆಸರನ್ನು ಬಳಸುವ ಹಕ್ಕು ಇಲ್ಲ. ಅವರು ನಾಲ್ಕನೇ ದರ್ಜೆಯ ನಾಗರಿಕರ ಮಟ್ಟಕ್ಕೆ ಕುಸಿದಿದ್ದಾರೆ.

ಈ ಹೇಳಿಕೆಯ ಬಗ್ಗೆ ಗರಂ ಆಗಿರುವ ಕಾಂಗ್ರೆಸ್, ಅನ್ವರ್ ಆಕ್ಷೇಪಾರ್ಹ ಹೇಳಿಕೆ ಹಿಂದೆ ಸಿಎಂ ಪಿಣರಾಯ್ ಪಾತ್ರವಿದೆ ಎಂದು ಆರೋಪ ಮಾಡಿದೆ. ಕೂಡಲೇ ಅವರ ವಿರುದ್ಧ ಕ್ರಮಕ್ಕೆ ಕೋರಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಪಿಣರಾಯಿ ವಿಜಯನ್‌ ಮಾತನಾಡಿ, ರಾಹುಲ್ ಗಾಂಧಿ ಮಾತನಾಡುವಾಗ ಜಾಗರೂಕವಾಗಿರಬೇಕು. ರಾಹುಲ್‌ ಈಗ ಬದಲಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ರಾಷ್ಟ್ರದ ಉದ್ದಗಲಕ್ಕೂ ನಡೆದಾಡಿದ್ದರಿಂದ ರಾಹುಲ್ ಜ್ಞಾನ ಸಂಪಾದಿಸಿರಬಹುದೆಂದು ನಾನು ಭಾವಿಸಿದ್ದೆ. ಆದರೆ ಅವರು ಕೇರಳದಲ್ಲಿ ನೀಡಿದ ಹೇಳಿಕೆ ರಾಜಕೀಯ ನಾಯಕನಿಗೆ ಶೋಭೆ ತರುವುದಿಲ್ಲ. ಈ ರೀತಿಯ ಹೇಳಿಕೆ ನೀಡಿ ಬಿಜೆಪಿಗೆ ಅವರು ಸಹಾಯ ಮಾಡಬಾರದು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಲು INDIA ಒಕ್ಕೂಟ ರಚಿಸಿರುವ ಕಾಂಗ್ರೆಸ್‌ ಮತ್ತು ಸಿಪಿಐಂ ಕೇರಳದಲ್ಲಿ ಪರಸ್ಪರ ವಾಗ್ದಾಳಿ ನಡೆಸುತ್ತಿದೆ. ಕಳೆದ ವಾರ ಕೇರಳದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಇಬ್ಬರು ಮುಖ್ಯಮಂತ್ರಿಗಳು ಜೈಲಿನಲ್ಲಿದ್ದಾರೆ.

ಕೇರಳದ ಮುಖ್ಯಮಂತ್ರಿ ಜೈಲಿಗೆ ಹೋಗಿಲ್ಲ ಅಂದರೆ ಅರ್ಥ ಏನು? ನಾನು ಬಿಜೆಪಿ ಮೇಲೆ 24×7 ದಾಳಿ ಮಾಡುತ್ತಿದ್ದೇನೆ. ಆದರೆ ಕೇರಳದ ಮುಖ್ಯಮಂತ್ರಿ ನನ್ನ ಮೇಲೆ 24×7 ದಾಳಿ ನಡೆಸುತ್ತಿದ್ದಾರೆ. ಇದು ಸ್ವಲ್ಪ ಗೊಂದಲಮಯವಾಗಿದೆ ಎಂದು ಹೇಳಿ ವಾಗ್ದಾಳಿ ನಡೆಸಿದ್ದರು.

ರಾಹುಲ್‌ ಗಾಂಧಿಯ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಎಲ್‌ಡಿಎಫ್‌ ಸಮನ್ವಯಕಾರ ಇಪಿ ಜಯರಾಜನ್‌, ಪಿಣರಾಯಿ ವಿಜಯನ್ ಅವರು ಬೆಳ್ಳಿಯ ಚಮಚದೊಂದಿಗೆ ಹುಟ್ಟಿದ ವ್ಯಕ್ತಿ ಅಥವಾ ವಿದೇಶದಿಂದ ಆಮದು ಮಾಡಿದ ಹಾಲು ಕುಡಿದು ಬೆಳೆದ ವ್ಯಕ್ತಿ ಅಲ್ಲ.

ಎಸಿ ಬಸ್ಸಿನಲ್ಲಿ ಪ್ರಯಾಣಿಸಿದರೆ ಜನರ ಸಮಸ್ಯೆ ಅರ್ಥವಾಗುವುದಿಲ್ಲ. ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ರಾಹುಲ್‌ ಗಾಂಧಿ ಬಂಧನ ಯಾಕೆ ಆಗಲಿಲ್ಲ? ರಾಷ್ಟ್ರೀಯ ನಾಯಕನಾಗಿರುವ ಇವರು ಈ ರೀತಿ ಮಾತನಾಡಿದರೆ ಕಾಂಗ್ರೆಸ್‌ ಪಕ್ಷ ಹೇಗೆ ಉಳಿಯುತ್ತದೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದರು.

Chaitra Kulal

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

6 hours ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

7 hours ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

7 hours ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

7 hours ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

8 hours ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

8 hours ago