Categories: ಮೈಸೂರು

ಮೈಸೂರು: ವಿಶ್ವದಲ್ಲಿ ಅತಿ ಹೆಚ್ಚು ಕಾರ್ಯಕರ್ತರ ಪಡೆ ಬಿಜೆಪಿಗಿದೆ- ಟಿ.ಎಸ್.ಶ್ರೀವತ್ಸ

 

ಮೈಸೂರು: ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಬಿಜೆಪಿ ಆಗಿದ್ದು ಕಾರ್ಯಕರ್ತರ ತ್ಯಾಗ ಬಲಿದಾನದಿಂದ ಬಿಜೆಪಿ ಪಕ್ಷ ದೇಶದಲ್ಲಿ ಸದೃಢವಾಗಿ ಬೆಳೆದು ನಿಂತಿದ್ದು ಈ ಪಕ್ಷದಲ್ಲಿ ಪ್ರಾಮಾಣಿಕರಿಗೆ ಮಾತ್ರ ಅವಕಾಶಗಳಿದ್ದು, ಅವಕಾಶಗಳನ್ನು ದುರುಪಯೋಗ ಮಾಡಿಕೊಂಡವರಿಗೆ ಪಕ್ಷ ಸರಿಯಾದ ಸಮಯದಲ್ಲಿ ಸರಿಯಾದ ಉತ್ತರ ನೀಡಲಿದೆ ಎಂದು ಕೆ ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ ಎಸ್ ಶಿವತ್ಸ ಹೇಳಿದರು.

ನಗರದ ಜಯನಗರ ಹಾಗೂ ವಿವೇಕಾನಂದ ನಗರ ಮತ್ತು ಅರವಿಂದ್ ನಗರ ಮನೆ ಮನೆಗೂ ತೆರಳಿ ಮತಯಾಚಿಸಿ ಮಾತನಾಡಿದ ಅವರು ನಾನು ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿದ್ದು, ಕಳೆದ 35 ವರ್ಷಗಳಿಂದ ಬಿಜೆಪಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದು, ಈ ಬಾರಿ ನನ್ನ ಸೇವೆಯನ್ನು ಗುರುತಿಸಿ ಬಿಜೆಪಿ ಪಕ್ಷ ಟಿಕೆಟ್ ನೀಡಿದ್ದು ನಾನು ಜಯಗಳಿಸಿ ವಿಧಾನಸೌಧ ಪ್ರವೇಶಿಸುವುದು ಶತಸಿದ್ಧವಾಗಿದೆ ಎಂದರು.

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಜನಪರ ಯೋಜನೆಗಳು ಮತ್ತು ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟತನದ ನಿರ್ಧಾರಗಳ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದ್ದು, ಕ್ಷೇತ್ರದ ಮತದಾರರು ಸಹ ಬಿಜೆಪಿ ಸರ್ಕಾರದ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದರು.

ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸದೃಢವಾಗಿ ಬೆಳೆದು ನಿಂತಿದ್ದು, ಕಾರ್ಯಕರ್ತರು ಸಹ ಹುಮ್ಮಸ್ಸಿನಿಂದ ಪಕ್ಷ ಸಂಘಟನೆ ಮಾಡುತ್ತಿದ್ದು, ಬಿಜೆಪಿ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ಮತವನ್ನು ಕೇಳಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ರಾಕೇಶ್ ಗೌಡ, ರಾಮ್ ಪ್ರಸಾದ್, ಪ್ರದೀಪ್ , ಅಜಯ್ ಶಾಸ್ತ್ರಿ, ಮಹದೇವ್, ನಾಗರಾಜ್, ಗೌರಿ, ಸುಜಾತ, ಉಮೇಶ್, ಶ್ರೀನಿವಾಸ, ರವಿ, ಗೌತಮ್, ಮನೋಜ್, ಪವನ್ ಹಾಗೂ ಇನ್ನಿತರರು ಪ್ರಚಾರದಲ್ಲಿ ಭಾಗಿಯಾಗಿದ್ದರು

Sushma K

Recent Posts

ಗರ್ಭಿಣಿಯ ಮರ್ಯಾದೆ ಗೇಡು ಹತ್ಯೆ: ಇಬ್ಬರು ಆರೋಪಿಗಳಿಗೆ 4.19 ಲಕ್ಷ ರೂ. ದಂಡ, ಗಲ್ಲು ಶಿಕ್ಷೆ

ಗರ್ಭಿಣಿಯನ್ನು ಮರ್ಯಾದೆ ಗೇಡು ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ವಿಜಯಪುರ ಜಿಲ್ಲೆಯ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ…

2 mins ago

ಆಯೋಗದ ನಿಯಮ ಉಲ್ಲಂಘಿಸಿದಲ್ಲಿ ಪ್ರಜಾಪ್ರತಿನಿಧಿ ವಿರುದ್ಧ ಕ್ರಮ ಖಚಿತ : ಡಿಸಿ

ಚುನಾವಣಾ ಆಯೋಗವು ಮೇ. 5, 2024 ರ ಸಾಯಂಕಾಲ 6 ಗಂಟೆಯಿಂದ ಮತದಾನ ದಿನವಾದ ಮೇ. 07, 2024ರಂದು ಮತದಾನ…

23 mins ago

ಜೆಡಿಎಸ್‌ ನಾಯಕರ ಕುಟುಂಬದೊಳಗಿನ ಜಗಳದಿಂದ ಪ್ರಜ್ವಲ್‌ ಪ್ರಕರಣ ಹೊರಬಿದ್ದಿದೆ: ಡಿ.ಕೆ. ಶಿವಕುಮಾರ್‌

ಜೆಡಿಎಸ್‌ ನಾಯಕರ ಕುಟುಂಬದೊಳಗಿನ ಜಗಳದಿಂದ ಪ್ರಜ್ವಲ್‌ ಪ್ರಕರಣ ಹೊರಬಿದ್ದಿದೆ: ಡಿ.ಕೆ. ಶಿವಕುಮಾರ್‌

30 mins ago

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ ಕಾಂಗ್ರೆಸ್‌ ಅಭ್ಯರ್ಥಿ

ಇದೀಗ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.   ಸೂರತ್, ಇಂದೋರ್ ಬಳಿಕ ಇದೀಗ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್…

33 mins ago

ಫೇಕ್‌ ನ್ಯೂಸ್‌: ಕೋವಿಶೀಲ್ಡ್​ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು

ಕೊರೊನಾ ಸಂದರ್ಭದಲಲಿ ಕೋವಿಶೀಲ್ಡ್‌ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ

48 mins ago

ಬಿಸಿಲಿನ ಶಾಖಕ್ಕೆ ರಾಯಚೂರಿನಲ್ಲಿ ಐವರು ಬಲಿ : ಹೊತ್ತಿ ಉರಿದ ಕಾರು

ಜಿಲ್ಲೆಯಲ್ಲಿ ಬಿಸಿಲು ಆವರಿಸಿಕೊಂಡಿದ್ದು, ಬಿಸಿಲಿನ ಸಾಖಕ್ಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಮೃತಪಟ್ಟಿದ್ದಾರೆ. ಹಾಗೂ ಶಕ್ತಿನಗರದಲ್ಲಿ ಕಾರಿಗೆ ಬೆಂಕಿ…

1 hour ago