Categories: ಕೇರಳ

ಗಲ್ಲು ಶಿಕ್ಷೆಗೆ ಗುರಿಯಾದ ಭಾರತದ ಶುಶ್ರೂಷಕಿ; ಮಗಳ ರಕ್ಷಣೆಗೆ ತಾಯಿಯ ಹರಸಾಹಸ

ತಿರುವನಂತಪುರ: ಭಾರತ ಮೂಲದ ನಿಮಿಷಾ ಪ್ರಿಯಾ ಯೆಮನ್‌ನಲ್ಲಿ ಶುಶ್ರೂಷಕಿಯಾಗಿದ್ದರು. 2017ರಲ್ಲಿ ಭಾರತಕ್ಕೆ ಮರಳಲು ತಲಾಲ್‌ ಅಬ್ದೊ ಮಹ್ದಿ ಎನ್ನುವಾತನ ವಶದಲ್ಲಿದ್ದ ತನ್ನ ಪಾಸ್‌ಪೋರ್ಟ್‌ ಪಡೆದುಕೊಳ್ಳಲು ಆತನಿಗೆ ನಿದ್ದೆಬರುವ ಚುಚ್ಚುಮದ್ದು ನೀಡಿದ್ದರು, ಆದರೆ ಚುಚ್ಚುಮದ್ದಿನಲ್ಲಿನ ಔಷಧ ಓವರ್‌ ಡೋಸ್‌ಆಗಿ ಆತ ಮೃತಪಟ್ಟಿದ್ದ.

ಕೊಲೆ ಪ್ರಕರಣ ಸಾಬೀತಾದ ಹಿನ್ನೆಲೆ ನಿಮಿಷಾ ಅವರಿಗೆ ಅಲ್ಲಿನ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಹೀಗಾಗಿ 2017ರಿಂದ ನಿಮಿಷಾ ಅವರು ಯೆಮನ್‌ ಜೈಲಿನಲ್ಲಿದ್ದಾರೆ. ಇನ್ನು ಮರಣದಂಡನೆ ಶಿಕ್ಷೆಗೆ ಗುರಿಯಾಗಿ  ಜೈಲಿನಲ್ಲಿರುವ ಮಗಳನ್ನು 11 ವರ್ಷದ ಬಳಿಕ ತಾಯಿ ಭೇಟಿಯಾಗಿದ್ದು, ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.

ಮಗಳನ್ನು ಭೇಟಿಯಾದ ಬಳಿಕ ವಿಡಿಯೊ ಸಂದೇಶ ಹಂಚಿಕೊಂಡ ಪ್ರೇಮಾ ಕುಮಾರಿ ಅವರು, ‘ಮಗಳನ್ನು ಮತ್ತೆ ನೋಡುತ್ತೇನೆ ಎಂದುಕೊಂಡಿರಲಿಲ್ಲ, ನನ್ನನ್ನು ನೋಡುತ್ತಿದ್ದಂತೆ ಅವಳು ಓಡಿ ಬಂದು ಅಪ್ಪಿಕೊಂಡಳು. ಅವಳ ಮದುವೆಯ ಸಂದರ್ಭದಲ್ಲಿ ನೋಡಿದ್ದೇ ಕೊನೆಯಾಗಿತ್ತು. ಅದಾದ ಬಳಿಕ ಇಲ್ಲಿಯೇ ನೋಡಿದ್ದು. ಇಬ್ಬರು ಹಲವು ಗಂಟೆ ಒಟ್ಟಿಗೆ ಕಳೆದೆವು. ಒಟ್ಟಿಗೆ ಊಟ ಮಾಡಿದೆವು. ಜೈಲಿನಲ್ಲಿ ಹಲವು ವಯಸ್ಸಾದ ಮಹಿಳೆಯರಿದ್ದಾರೆ. ನಿಮಿಷಾ ಅವರೆಲ್ಲರ ಜೀವನದ ಭಾಗವಾಗಿದ್ದಾಳೆ. ಅವರೂ ಬಂದು ನನ್ನನ್ನು ಅಪ್ಪಿಕೊಂಡರು. ದೇವರ ಆಶೀರ್ವಾದ ಮತ್ತು ಯೆಮನ್‌ ಸರ್ಕಾರದ ಕರುಣೆಯಿಂದ ನಿಮಿಷಾ ಸುರಕ್ಷಿತವಾಗಿದ್ದಾಳೆ, ಅವರಿಗೆ ನಾನು ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ.

ಗಲ್ಲು ಶಿಕ್ಷೆ ರದ್ದುಪಡಿಸುವಂತೆ ಕೋರಿದ ನಿಮಿಷಾ ಅವರ ಅರ್ಜಿಯನ್ನು ಯೆಮನ್ ಸುಪ್ರೀಂ ಕೋರ್ಟ್‌ ಕಳೆದ ನವೆಂಬರ್‌ನಲ್ಲಿ ತಿರಸ್ಕರಿಸಿತ್ತು. ಆದರೆ ಕೊನೆಯ ಆಯ್ಕೆಯಾಗಿ ಗಲ್ಲು ಶಿಕ್ಷೆಯಿಂದ ಪಾರಾಗಲು ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಮೊತ್ತ ನೀಡಿ ಕ್ಷಮೆ ಕೇಳುವಂತೆ ಹೇಳಿತ್ತು.

ಈ ಬಗ್ಗೆ ಕಳೆದ ಡಿಸೆಂಬರ್‌ನಲ್ಲಿ ನಿಮಿಷಾ ತಾಯಿ ಪ್ರೇಮಾ ಕುಮಾರಿ ದೆಹಲಿ ಹೈಕೋರ್ಟ್‌ ಮಟ್ಟಿಲೇರಿದ್ದರು. ಪ್ರೇಮಾ ಕುಮಾರಿ ಅವರ ಮನವಿಯನ್ನು ಪುರಸ್ಕರಿಸಿದ್ದ ದೆಹಲಿ ಹೈಕೋರ್ಟ್‌, ಯೆಮನ್‌ಗೆ ತೆರಳಿ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಮೊತ್ತ ನೀಡಿ ಸಂಧಾನ ನಡೆಸಿ, ನಿಮಿಷಾ ಅವರನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಲು ಯತ್ನಿಸುವ ಪ್ರಯತ್ನಕ್ಕೆ ಅನುಮತಿ ನೀಡಿತ್ತು.

Ashitha S

Recent Posts

ಬೂತ್​ನಲ್ಲಿ ಲಕ್ಕಿ ಡ್ರಾ : ಮತ ಚಲಾಯಿಸಿದ ಮತದಾರನಿಗೆ ಸಿಕ್ತು ವಜ್ರದ ಉಂಗುರ

ಭೋಪಾಲ್​ನ ಪ್ರತಿ ಬೂತ್​ನಲ್ಲಿ ಲಕ್ಕಿ ಡ್ರಾ ನಡೆಸಲಾಗಿದೆ. ಅದರಲ್ಲಿ ಅದೃಷ್ಟಶಾಲಿ ಮತದಾರರಿಗೆ ಉಡುಗೊರೆ ಸಿಗಲಿದೆ ಎಂದು ಘೋಷಣೆ ಮಾಡಲಾಗಿತ್ತು. ಹೀಗೇ…

16 mins ago

ಹೊಸ ಕೋವಿಡ್-19 ರೂಪಾಂತರ ಯುಎಸ್‌ನಲ್ಲಿ ಪತ್ತೆ!

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪತ್ತೆಯಾದ ಈ ಭಿನ್ನ ಗುಂಪನ್ನು ತೀವ್ರ ತೀವ್ರ ಉಸಿರಾಟದ ಸಿಂಡ್ರೋಮ್ ಕೊರೊನಾ ವೈರಸ್ 2 (SARS-CoV-2) ಫ್ಲರ್ಟ್…

32 mins ago

ಇವಿಎಂ,ಚುನಾವಣಾ ಸಿಬ್ಬಂದಿ ಇದ್ದ ಬಸ್‌ಗೆ ಬೆಂಕಿ : ಯಂತ್ರಗಳು ಡ್ಯಾಮೇಜ್‌

ಚುನಾವಣೆ ಬಳಿಕ ಇವಿಎಂ ಯಂತ್ರಗಳು ಹಾಗೂ ಮತಗಟ್ಟೆ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್​ಗೆ ಬೆಂಕಿ ತಗುಲಿರುವ ಘಟನೆ ಮಧ್ಯಪ್ರದೇಶದ ಬೇತುಲ್​ನಲ್ಲಿ ನಡೆದಿದೆ.…

49 mins ago

ಮತ್ತಷ್ಟು ಮೇಲಕ್ಕೆ ಎರುತ್ತೀರಿ : ಶ್ರೀನಿಧಿ ಶೆಟ್ಟಿಗೆ ದೈವದ ಅಭಯ

ಕೆಜಿಎಪ್ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿಯವರು ತನ್ನ ಕುಟುಂಬದ ದೈವಗಳಿಗೆ ಹೇಳಿದ್ದ ಹರಕೆಯ ನೇಮೋತ್ಸವವನ್ನು ನೆರವೇರಿಸಿದರು. ಮಂಗಳೂರಿನ ಹೊರವಲಯದ ಕಿನ್ನಿಗೋಳಿ…

1 hour ago

ಸಾಹಿತಿ, ಶಿಕ್ಷಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ, ಸಾಹಿತಿ, ಶಿಕ್ಷಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ (79) ಮಂಗಳವಾರ…

1 hour ago

ಆಟವಾಡ್ತಿದ್ದ ಮಗು ಅಪಹರಣ : ಮೂರೇ ದಿನದಲ್ಲಿ ಪತ್ತೆ ಹಚ್ಚಿದ ಬೀದರ್​ ಪೊಲೀಸ್

ಅಪಹರಣಕ್ಕೊಳಗಾದ ಮಗವನ್ನ ಮೂರು ದಿನದಲ್ಲಿಯೇ ಬಬೀದರ ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೇ 4 ರಂದು ಬೀದರ್​ನ ಓಲ್ಡ್ ಸಿಟಿಯ…

2 hours ago