News Karnataka Kannada
Tuesday, May 07 2024
ಕೇರಳ

ಕೇರಳದಿಂದ ಕರ್ನಾಟಕಕ್ಕೆ ತೆರಳುವವರಿಗೆ ನಿರ್ಬಂಧ ಮಧ್ಯಪ್ರವೇಶಿಸುವಂತೆ ಸರ್ಕಾರಕ್ಕೆ ಮನವಿ

Kerala News
Photo Credit :

ಕಾಸರಗೋಡು : ಕೇರಳದಲ್ಲಿ ಕೊರೋನ ಪ್ರಕರಣಗಳು ಇಳಿಕೆಯಾಗಿದ್ದರೂ ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿರುವ ಒಮೆಕ್ರೋನ್ ಸೋಂಕು ಹಿನ್ನಲೆಯಲ್ಲಿ ಕೇರಳದಿಂದ ಕರ್ನಾಟಕಕ್ಕೆ ತೆರಳುವವರಿಗೆ ನಿರ್ಬಂಧ ವಿಧಿಸಿರುವ ಕರ್ನಾಟಕ ಸರಕಾರದ ತೀರ್ಮಾನ ಬಗ್ಗೆ ಮಧ್ಯಪ್ರವೇಶಿಸುವಂತೆ ಮಂಜೇಶ್ವರ ಶಾಸಕ ಎ .ಕೆ . ಎಂ ಆಶ್ರಫ್ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಿಗೆ ಮನವಿ ಸಲ್ಲಿಸಿದ್ದಾರೆ.

ಕಾಸರಗೋಡು ಜಿಲ್ಲೆ ಅದರಲ್ಲೂ ಮಂಜೇಶ್ವರ ವ್ಯಾಪ್ತಿಯ ಸಾವಿರಾರು ಮಂದಿ ಶೈಕ್ಷಣಿಕ , ಉದ್ಯೋಗ , ಆಸ್ಪತ್ರೆ ಹಾಗೂ ಇನ್ನಿತರ ಅಗತ್ಯಗ ಳಿ ಗಾಗಿ ಮಂಗಳೂರನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ಸೋಂಕು ಇಳಿಕೆಯಾಗಿದ್ದರೂ ತಲಪಾಡಿ ಸೇರಿದಂತೆ ಕೇರಳ – ಕರ್ನಾಟಕ ಗಡಿಯಲ್ಲಿ ಸಂಚಾರಕ್ಕೆ ಮತ್ತೆ ನಿರ್ಬಂಧ ಹೇರಲಾಗಿದ್ದು , ಆರ್ ಟಿ ಪಿ ಸಿ ಆರ್ ನೆಗಟಿವ್ ಸರ್ಟಿಫಿಕೇಟ್ ಕಡ್ಡಾಯ ಗೊಳಿಸಲಾಗಿದೆ.

ಇದರಿಂದ ದೈನಂದಿನ ಮಂಗಳೂರಿಗೆ ತೆರಳುವವರು ಸಮಸ್ಯೆಗೆ ಸಿಲುಕಿದ್ದಾರೆ. ಎರಡು ಡೋಸ್ ವ್ಯಾಕ್ಸಿನ್ ಪಡೆದವ ರಿಗೂ ಅನುಮತಿ ನೀಡುತ್ತಿಲ್ಲ . ಕರ್ನಾಟಕ ಸರಕಾರ ಈ ತೀರ್ಮಾನ ದಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಮಧ್ಯಪ್ರವೇಶಿಸುವಂತೆ ಶಾಸಕರು ಒತ್ತಾಯಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು