ಜಾರ್ಖಂಡ್ : ಪತ್ನಿಯ ಅನೈತಿಕ ಸಂಬಂಧದ ಗುಟ್ಟು ರಟ್ಟಾಗಿರುವುದಕ್ಕೆ ಪತಿಯೇ ಆಕೆಯನ್ನು ಹತ್ಯೆ ಮಾಡಿರುವ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ. ಆದರೆ ಇಲ್ಲೊಬ್ಬ ಪಾಪಿ ಪತಿ ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಪ್ರಾಣ ತೆಗೆದಿದ್ದಾನೆ. ಈತ ರಾತ್ರಿ ಊಟ ಕೊಡಲು ವಿಳಂಬ ಮಾಡಿದ ಕಾರಣಕ್ಕೆ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ.
ಈ ದುರ್ಘಟನೆ ನಡೆದಿರುವುದು ಜಾರ್ಖಂಡ್ ನ ಕುಂತಿ ಜಿಲ್ಲೆಯ ಕಲಾಮತಿ ಹಳ್ಳಿಯಲ್ಲಿ. 70 ವರ್ಷದ ಗಂಡ ಹೆಂಡತಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ಘಟನೆಯ ವಿವರ : ಮನೆಯಲ್ಲಿಯೇ ಇದ್ದ ಗಂಡ ಬೇಗ ಅಡುಗೆ ಮಾಡುವಂತೆ ಪತ್ನಿಗೆ ಹೇಳಿದ್ದ. ಆಕೆ ಅಡುಗೆ ಬೇಗ ಮಾಡಿದ್ದಳು ಆದರೆ, ಊಟ ಬಡಿಸಲು ತಡ ಮಾಡಿದಳು. ಇದರಿಂದ ಕೋಪಗೊಂಡ ಪತಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಆಕೆ ಹಲ್ಲೆಗೆ ತತ್ತರಿಸಿ ಅಲ್ಲೇ ಕುಸಿದಿದ್ದಾಳೆ. ಏನೂ ಮಾಡದಂತೆ ಕೇಳಿಕೊಂಡರೂ ಹಲ್ಲೆಯನ್ನು ಮುಂದುವರೆಸಿ ಕೊಲೆ ಮಾಡಿದ್ದಾನೆ. ಇಡೀ ರಾತ್ರಿ ಹೆಂಡತಿ ಮೃತದೇಹದ ಜತೆ ಇದ್ದಾನೆ.
ಈ ಘಟನೆ ನಡೆದ ಮರು ದಿನ ಪೊಲೀಸರಿಗೆ ಮಾಹಿತಿ ತಿಳಿದು ಆರೋಪಿಯನ್ನು ಬಂಧಿಸಿದ್ದಾರೆ. ಇಬ್ಬರೂ ಗಲಾಟೆಗೂ ಮುನ್ನ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ವಿಚಾರಣೆ ಮುಂದುವರೆದಿದೆ.