ಹೈದರಾಬಾದ್ನಲ್ಲಿ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿ ರೈಲ್ವೆ ಹಳಿ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರು ಪ್ರಮುಖ ಆರೋಪಿ ಪಲ್ಲಂಕೊಂಡ ರಾಜುಗಾಗಿ ಶೋಧ ನಡೆಸುತ್ತಿದ್ದು, ಇದೀಗ ರೈಲ್ವೆ ಹಳಿಯಲ್ಲಿ ಈತ ಶವವಾಗಿ ಪತ್ತೆಯಾಗಿದ್ದಾನೆ.
ಪೊಲಿಸರಿಗೆ ಸಿಕ್ಕಿ ಬೀಳುವ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಆತನ ಕೈ ಮೇಲಿದ್ದ ಹಚ್ಚೆಯಿಂದ ಗುರುತು ಪತ್ತೆ ಹಚ್ಚಲಾಗಿದೆ.