ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಮನೆಯೊಂದರಲ್ಲಿ ನಿಗೂಢ ಸ್ಫೋಟವಾಗಿದ್ದು, ಯುವತಿ ಮೃತಪಟ್ಟಿದ್ದಾಳೆ. ಸ್ಫೋಟದಿಂದ ಆರು ಮಂದಿ ಗಾಯಗೊಂಡಿದ್ದಾರೆ.
ಮನೆಯಲ್ಲಿ ಶೆಲ್ಗಳು ಹಾಗೂ ಗ್ರೇನೇಡ್ ಸ್ಕ್ರಾಪ್ ವಸ್ತುಗಳಿದ್ದು, ಅದರಿಂದ ಸ್ಫೋಟ ಸಂಭವಿಸಿರಬಹುದು ಎನ್ನಲಾಗಿದೆ. 17 ವರ್ಷದ ಶಬ್ನಮ್ ವಾನಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.