News Karnataka Kannada
Tuesday, May 07 2024
ಬೆಂಗಳೂರು

ಕಳಪೆ ಮಾಸ್ಕ್‌ ಪೂರೈಕೆ: ಪಿ.ಆರ್‌. ರಮೇಶ್‌ ಆರೋಪ

Mask 03092021
Photo Credit :

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯರಿಗೆ ಅಧಿವೇಶನದ ಸಮಯದಲ್ಲಿ ಕಳಪೆ ಹಾಗೂ ಅವಧಿ ಮುಗಿದ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ಸದಸ್ಯ ಪಿ.ಆರ್‌. ರಮೇಶ್‌ ಗುರುವಾರ ಸದನದಲ್ಲೇ ಆರೋಪಿಸಿದರು.

ಕಲಾಪ ಆರಂಭವಾಗುತ್ತಿದ್ದಂತೆ ಮಾಸ್ಕ್‌ಗಳನ್ನು ಪ್ರದರ್ಶಿಸಿದ ಅವರು, ಒಂದು ವರ್ಷ ಹಿಂದೆಯೇ ಅವಧಿ ಮುಗಿದಿರುವ ಮಾಸ್ಕ್‌ಗಳಿಗೆ ಎರಡು ವರ್ಷ ಅವಧಿ ಎಂದು ಹೊಸ ಸ್ಟಿಕ್ಕರ್‌ ಅಂಟಿಸಿ ಕೊಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇಕ್‌ ಇನ್‌ ಇಂಡಿಯಾ ಎನ್ನುತ್ತಿದ್ದಾರೆ. ವಿಧಾನ ಪರಿಷತ್‌ನಲ್ಲೇ ಚೀನಾದಲ್ಲಿ ಉತ್ಪಾದಿಸಿರುವ ಕಳಪೆ ಮಾಸ್ಕ್‌ಗಳನ್ನು ನೀಡಲಾಗುತ್ತಿದೆ ಎಂದು ಮಾಸ್ಕ್‌ಗಳನ್ನು ಪ್ರದರ್ಶಿಸಿದರು.

ಆರೋಪದ ಕುರಿತು ಪರಿಶೀಲನೆ ನಡೆಸುವಂತೆ ಸಭಾಪತಿ ಬಸವರಾಜ ಹೊರಟ್ಟಿ ಅಧಿಕಾರಿಗಳಿಗೆ ಸೂಚಿಸಿದರು. ಅಸಮಾಧಾನಗೊಂಡಿದ್ದ ರಮೇಶ್‌ ಸದನದಿಂದ ಹೊರ ನಡೆದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು