News Karnataka Kannada
Wednesday, May 01 2024
ಜಮ್ಮು-ಕಾಶ್ಮೀರ

ಗಿಲಾನಿ ಕುಟುಂಬದ ವಿರುದ್ಧ ದೇಶ ವಿರೋಧಿ ಘೋಷಣೆ

New Project (10)
Photo Credit :

ಜಮ್ಮು ಕಾಶ್ಮೀರ :  ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಗಿಲಾನಿ ಮೃತದೇಹಕ್ಕೆ ಕುಟುಂಬಸ್ಥರು ಪಾಕಿಸ್ತಾನ ಧ್ವಜ ಹೊದಿಸಿದ್ದು, ದೇಶ ವಿರೋಧಿ ಘೋಷಣೆ ಕೂಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಗಿಲಾನಿ ಕುಟುಂಬದ ವಿರುದ್ಧ ಬಗ್ದಾಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಿಲಾನಿ ಅಂತ್ಯ ಸಂಸ್ಕಾರದ ವೇಳೆ ಕುಟುಂಬಸ್ಥರು ಈ ರೀತಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿರುವ ಹಿನ್ನೆಲೆ ಜಮ್ಮು ಕಾಶ್ಮೀರ ಪೊಲೀಸರು ಎಫ್‌ಐ ಆರ್ ದಾಖಲಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಪೊಲೀಸರು, ಸಯದ್ ಅಲಿ ಗಿಲಾನಿ ಮೃತ ದೇಹಕ್ಕೆ ಪಾಕ್ ಧ್ವಜ ಹೊದಿಸಿದವರ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ ಎಂದರು.

ಈ ನಡುವೆ ಪೊಲೀಸರ ವಿರುದ್ಧವೇ ಆರೋಪಿಸಿರುವ ಗಿಲಾನಿ ಪುತ್ರ ನಸೀಮ್ ಗಿಲಾನಿ, ನಮ್ಮ ತಂದೆಯ ಮೃತದೇಹವನ್ನು ಪೊಲೀಸರು ಬಲವಂತವಾಗಿ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ನಮ್ಮ ಮನೆಯ ಮಹಿಳೆಯರು ಸೇರಿದಂತೆ ಇತರೆ ಕುಟುಂಬಸ್ಥರನ್ನು ಥಳಿಸಿರುವುದಾಗಿ ಹೇಳಿದ್ದಾರೆ. 91 ವರ್ಷದ ಗಿಲಾನಿ ಸೆಪ್ಟೆಂಬರ್ 1 ರ ರಾತ್ರಿ ಮೃತಪಟ್ಟಿದ್ದು, ಅಂದು ಮುಂಜಾಗ್ರತಾ ಕ್ರಮವಾಗಿ ಜಮ್ಮು ಕಾಶ್ಮೀರದ ಹಲವೆಡೆ ಅಂತರ್ಜಾಲ ಸ್ಥಗಿತಗೊಳಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು