News Karnataka Kannada
Sunday, May 19 2024
ದೇಶ

ಹಮಾಸ್‌ನ್ನು ಉಗ್ರ ಸಂಘಟನೆ ಎಂದು ಘೋಷಿಸಿ: ಭಾರತಕ್ಕೆ ಇಸ್ರೇಲ್ ಮನವಿ

Photo Credit : News Kannada

ನವದೆಹಲಿ: ಇಸ್ರೇಲ್ ಮೇಲೆ ಅ.7 ರಂದು ದಾಳಿ ನಡೆಸಿದ ಹಮಾಸ್ ಉಗ್ರ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಘೋಷಿಸಬೇಕು ಎಂದು ಇಸ್ರೇಲ್‌ ಭಾರತವನ್ನು ಕೇಳಿದೆ.

ಈ ಬಗ್ಗೆ ಮಾತನಾಡಿದ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನಾರ್ ನಾರ್ ಗಿಲೋನ್, ಭಾರತದ ಬೆಂಬಲಕ್ಕೂ ಧನ್ಯವಾದ ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಸಂವಾದದಲ್ಲಿ ಇಸ್ರೇಲ್ ರಾಯಭಾರಿ ಗಿಲೋನ್ ಈ ವಿಚಾರ ತಿಳಿಸಿದ್ದಾರೆ. ಅ.7 ರ ಈ ಭೀಕರ ದಾಳಿಯಲ್ಲಿ ಇಸ್ರೇಲ್‌ನಲ್ಲಿ 1,200ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. “ಭಾರತದಲ್ಲಿ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಇದು ಸರಿಯಾದ ಸಮಯ”, ಈ ಹಿಂದೆಯೂ ಭಾರತಕ್ಕೆ ಈ ಮನವಿ ಮಾಡಲಾಗಿತ್ತು ಎಂದು ಗಿಲೋನ್ ಹೇಳಿದ್ದಾರೆ. ಅಲ್ಲದೇ ಹಮಾಸ್ ವಿರುದ್ಧದ ಇಸ್ರೇಲ್‌ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಗೆ ಶೇ.100 ರಷ್ಟು ಬೆಂಬಲ ಸೂಚಿಸಿರುವ ಭಾರತಕ್ಕೆ ಅವರು ಇದೇ ವೇಳೆ ಧನ್ಯವಾದವನ್ನು ಅರ್ಪಿಸಿದರು.

ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತ ನಮಗೆ ದೃಢವಾಗಿ ಬೆಂಬಲ ನೀಡುತ್ತಿದೆ. ಅಲ್ಲದೇ ಪ್ರಮುಖ ದೇಶಗಳು ನಮ್ಮೊಂದಿಗಿವೆ ಎಂದು ಗಿಲೋನ್ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು