News Karnataka Kannada
Tuesday, May 07 2024
ವಿದೇಶ

ಗಗನಯಾತ್ರಿಗಳೊಂದಿಗೆ ಬ್ಯಾಹ್ಯಾಕಾಶ ನಿಲ್ದಾಣಕ್ಕೆ ಚೀನಾ ಬಾಹ್ಯಾಕಾಶ ನೌಕೆ

Chinese spacecraft to space station with astronauts
Photo Credit : News Kannada

ಬೀಜಿಂಗ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆ ‘ಗಗನಯಾನ’ದ ಪರೀಕ್ಷಾರ್ಥ ಪ್ರಯೋಗವನ್ನು ಶನಿವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಯಶಸ್ವಿಯಾಗಿ ನಡೆಸಿತ್ತು.

ಈ ಪ್ರಯೋಗವು ಮಾನವರಹಿತವಾಗಿದ್ದು, ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಯಲ್ಲಿ ಇದು ಮೊದಲ ಮೈಲುಗಲ್ಲಾಗಿದೆ. ಆದರೆ ಚೀನಾ ಈ ವಿಚಾರದಲ್ಲಿ ನಮಗಿಂತ ಹಲವು ಪಟ್ಟು ಮುಂದಿದೆ. ಮನುಷ್ಯರನ್ನು ಚಂದ್ರನತ್ತ ಕಳುಹಿಸುವ ಯೋಜನೆ ಅಂಗವಾಗಿ ಚೀನಾ ಗುರುವಾರ ತನ್ನ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಹೊಸ ಸಿಬ್ಬಂದಿಯನ್ನು ಕಳುಹಿಸಿದೆ.

ಶೆಂಝೌ-17 ವಾಯುವ್ಯ ಚೀನಾದ ಜಿಯುಕ್ವಾನ್ ಉಡಾವಣಾ ಕೇಂದ್ರದಿಂದ 11:14 am ಕ್ಕೆ ಉಡಾವಣೆ ಆಗಿದ್ದು, ಬಾಹ್ಯಾಕಾಶ ನಿಲ್ದಾಣದ ನಿರ್ಮಾಣದ ನಂತರ ಕಿರಿಯ ಸರಾಸರಿ ವಯಸ್ಸಿನ ಮೂರು-ಗಗನಯಾತ್ರಿ ತಂಡವನ್ನು ಹೊತ್ತೊಯ್ಯಿತು. ಲಾಂಗ್ ಮಾರ್ಚ್-2ಎಫ್ ಕ್ಯಾರಿಯರ್ ರಾಕೆಟ್ ಮೇಲಿರುವ ಬಾಹ್ಯಾಕಾಶ ನೌಕೆಯು ವಾಯುವ್ಯ ಚೀನಾದ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆ ಆಗಿದೆ ಎಂದು ಚೀನಾದ ರಾಜ್ಯ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು