News Karnataka Kannada
Tuesday, May 07 2024
ಹಿಮಾಚಲ ಪ್ರದೇಶ

ಕೆಮಿಕಲ್‌ ಬಳಸಿ ಕಾರಿನ ಗಾಜು ಒಡೆದು ಕಳ್ಳತನ: ವಿಡಿಯೋ ನೋಡಿ

ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಹಲವರು ಈಗಾಗಲೇ ಪ್ರವಾಸಿ ತಾಣ, ನೆಚ್ಚಿನ ತಾಣಗಳನ್ನು ತಲುಪಿದ್ದಾರೆ. ಅದೇ ರೀತಿ ಹೊಸ ವರ್ಷ ಆಚರಣೆಗೆ ಜನರು ಹಿಮಾಚಲ ಪ್ರದೇಶಕ್ಕೆ ತಂಡ ತಂಡವಾಗಿ ಆಗಮಿಸುತ್ತಿದ್ದಾರೆ. ಆದರೆ ಆದರೆ ಪ್ರವಾಸಿ ತಾಣಗಳಲ್ಲಿ ಇದೀಗ ಕಳ್ಳರ ಹಾವಳಿಗಳು ಹೆಚ್ಚಾಗಿದೆ. ನಿಲ್ಲಿಸಿರುವ ಕಾರುಗಳ ಗಾಜುಗಳನ್ನು ಕೆಮಿಕಲ್ ಬಳಸಿ ಸುಲಭವಾಗಿ ಒಡೆದು ಕಾರಿನೊಳಗಿನ ಅಮೂಲ್ಯ ವಸ್ತುಗಳನ್ನು ದೋಚುವ ಗ್ಯಾಂಗ್ ಎಲ್ಲೆಡೆ ಸಕ್ರಿಯವಾಗಿದೆ. ಈ ಕುರಿತು ಹಿಮಾಚಲ ಪ್ರದೇಶ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
Photo Credit : News Kannada

ಶಿಮ್ಲಾ: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಹಲವರು ಈಗಾಗಲೇ ಪ್ರವಾಸಿ ತಾಣ, ನೆಚ್ಚಿನ ತಾಣಗಳನ್ನು ತಲುಪಿದ್ದಾರೆ. ಅದೇ ರೀತಿ ಹೊಸ ವರ್ಷ ಆಚರಣೆಗೆ ಜನರು ಹಿಮಾಚಲ ಪ್ರದೇಶಕ್ಕೆ ತಂಡ ತಂಡವಾಗಿ ಆಗಮಿಸುತ್ತಿದ್ದಾರೆ. ಆದರೆ ಆದರೆ ಪ್ರವಾಸಿ ತಾಣಗಳಲ್ಲಿ ಇದೀಗ ಕಳ್ಳರ ಹಾವಳಿಗಳು ಹೆಚ್ಚಾಗಿದೆ. ನಿಲ್ಲಿಸಿರುವ ಕಾರುಗಳ ಗಾಜುಗಳನ್ನು ಕೆಮಿಕಲ್ ಬಳಸಿ ಸುಲಭವಾಗಿ ಒಡೆದು ಕಾರಿನೊಳಗಿನ ಅಮೂಲ್ಯ ವಸ್ತುಗಳನ್ನು ದೋಚುವ ಗ್ಯಾಂಗ್ ಎಲ್ಲೆಡೆ ಸಕ್ರಿಯವಾಗಿದೆ. ಈ ಕುರಿತು ಹಿಮಾಚಲ ಪ್ರದೇಶ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕಳೆದ ವಾರದಿಂದ ಹಿಮಾಚಲ ಪ್ರದೇಶದ ತುಂಬಾ ಪ್ರವಾಸಿಗಳೇ ತುಂಬಿ ಹೋಗಿದ್ದಾರೆ. ಎಲ್ಲಾ ರಸ್ತೆ, ಮೈದಾನ, ತಾಣಗಳಲ್ಲಿ ಪ್ರವಾಸಿಗಳು ಹಾಗೂ ವಾಹನಗಳೇ ಕಾಣುತ್ತಿದೆ. ಕೆಲ ಪ್ರದೇಶಗಳಲ್ಲಿ 5 ರಿಂದ 10 ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ ಸಂಭವಿಸಿತ್ತು. ವಾಹನ ಪಾರ್ಕ್ ಮಾಡಲು ಜಾಗವಿಲ್ಲದೆ ರಸ್ತೆ ಬದಿ, ಮೈದಾನ ಸೇರಿದಂತೆ ಹಲವೆಡೆ ಪಾರ್ಕಿಂಗ್ ಮಾಡಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು, ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಸುಲಭವಾಗಿ ಕೆಮಿಕಲ್ ಬಳಸಿ ಒಡೆಯುತ್ತಿದ್ದಾರೆ.

ಬಳಿಕ ಕಾರಿನೊಳಗೆ ಭದ್ರವಾಗಿ ಇಟ್ಟಿರುವ ಅಮೂಲ್ಯ ವಸ್ತುಗಳನ್ನು ಕದಿಯುವ ಘಟನೆಗಳು ಹೆಚ್ಚಾಗುತ್ತಿದೆ. ಹಿಮಾಚಲ ಪ್ರದೇಶ ಪೊಲೀಸರು ಕ್ರಿಸ್ಮಸ್ ರಜೆ ಸಂದರ್ಭದಲ್ಲಿ ನಡೆದ ಕಳ್ಳತನದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ರಸ್ತೆ ಬದಿಯಲ್ಲಿ ಟಾಟಾ ಹ್ಯಾರಿಯರ್ ಕಾರು ಪಾರ್ಕ್ ಮಾಡಲಾಗಿತ್ತು. ಕಳ್ಳನೊಬ್ಬ ಒಂದೆರೆಡು ನಿಮಿಷ ಅತ್ತ ಇತ್ತ ಗಮನಿಸಿ, ಜೇಬಿನಿಂದ ಕೆಮಿಕಲ್ ತೆಗೆದಿದ್ದಾನೆ. ಬಳಿಕ ಕಾರಿನ ಗಾಜಿನ ಮೇಲೆ ಸಿಂಪಡಿಸಿದ್ದಾನೆ. ಒಂದೆ ಸೆಕೆಂಡ್‌ನಲ್ಲಿ ಕಾರಿನ ಗಾಜು ಪುಡಿ ಪುಡಿಯಾಗಿದೆ. ಬಳಿಕ ಸುಲಭವಾಗಿ ಕಾರಿನೊಳಗಿದ್ದ ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾನೆ.

https://www.instagram.com/reel/CyDNoNYPM3-/?utm_source=ig_embed&ig_rid=a23aabd6-8cb2-45e6-89bc-35cb4493e838

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು