ಎರ್ನಾಕುಲಂ: ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ನಾಯಕನೊಬ್ಬ ಮಹಾತ್ಮ ಗಾಂಧಿ ಪ್ರತಿಮೆಗೆ ಅವಮಾನಿಸಿರುವ ಘಟನೆ ನಡೆದಿದೆ. ಎಸ್ಎಫ್ಐ ಆಲುವಾ ಪ್ರದೇಶ ಸಮಿತಿಯ ಸದಸ್ಯ ಆದೀನ್ ನಾಸರ್ ಅವರು ಮಹಾತ್ಮ ಗಾಂಧಿ ಪ್ರತಿಮೆಗೆ ಕೂಲಿಂಗ್ ಗ್ಲಾಸ್ ಹಾಕಿ ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಅದರ ಚಿತ್ರವನ್ನಯ ತೆಗೆದಿದ್ದಾರೆ.
ಅವರು ಚೂಂಡಿಯಲ್ಲಿರುವ ಭಾರತ ಮಾತಾ ಸ್ಕೂಲ್ ಆಫ್ ಲೀಗಲ್ ಸ್ಟಡೀಸ್ನನ ಸ್ಟೂಡೆಂಟ್ ಯೂನಿಯನ್ನ ನಾಯಕರೂ ಆಗಿದ್ದಾರೆ. ಅವರು ಗಾಂಧಿ ಪ್ರತಿಮೆಗೆ ಕೂಲಿಂಗ್ ಗ್ಲಾಸ್ ಹಾಕುತ್ತಿರುವ ವಿಡಿಯೋವನ್ನು ಸೆರೆಹಿಡಿಯಲಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಕೇರಳ ಸ್ಟೂಡೆಂಟ್ ಯೂನಿಯನ್ ಆಕ್ರೋಶ ವ್ಯಕ್ತಪಡಿಸಿದ್ದು, ಎಸ್ಎಫ್ಐ ಮುಖಂಡನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಎಸ್ಯು ಪೊಲೀಸರಿಗೆ ದೂರು ನೀಡಿದೆ.