News Karnataka Kannada
Saturday, April 27 2024
ಹರ್ಯಾಣ

ಕಾಂಗ್ರೆಸ್‌ ತೊರೆದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌ ಬಿಜೆಪಿಗೆ ಸೇರ್ಪಡೆ

ಶ್ರೀಮಂತ ಮಹಿಳೆ ಎಂದು ಹೆಸರುವಾಸಿಯಾಗಿರುವ ಹರಿಯಾಣದ ಮಾಜಿ ಸಚಿವೆ ಸಾವಿತ್ರಿ ಜಿಂದಾಲ್‌ ಅವರು ಇದೀಗ ಕಾಂಗ್ರೆಸ್‌ ತೊರೆದ ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡರು. ಇತ್ತೀಚೆಗಷ್ಟೆ ಸಾವಿತ್ರಿ ಅವರ ಪುತ್ರ, ಉದ್ಯಮಿ ನವೀನ್‌ ಜಿಂದಾಲ್‌ ಅವರು ಕೂಡ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ್ದರು.
Photo Credit : NewsKarnataka

ಚಂಢೀಗಡ: ಶ್ರೀಮಂತ ಮಹಿಳೆ ಎಂದು ಹೆಸರುವಾಸಿಯಾಗಿರುವ ಹರಿಯಾಣದ ಮಾಜಿ ಸಚಿವೆ ಸಾವಿತ್ರಿ ಜಿಂದಾಲ್‌ ಅವರು ಇದೀಗ ಕಾಂಗ್ರೆಸ್‌ ತೊರೆದ ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡರು. ಇತ್ತೀಚೆಗಷ್ಟೆ ಸಾವಿತ್ರಿ ಅವರ ಪುತ್ರ, ಉದ್ಯಮಿ ನವೀನ್‌ ಜಿಂದಾಲ್‌ ಅವರು ಕೂಡ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ್ದರು.

ಸಾವಿತ್ರಿ ಜಿಂದಾಲ್‌ ಅವರು ಈ ವರ್ಷದ ಫೋರ್ಬ್ಸ್‌ನ ಪಟ್ಟಿಯಲ್ಲಿ ದೇಶದ ಶ್ರೀಮಂತ ಮಹಿಳೆ ಎನ್ನುವ ಸ್ಥಾನ ಪಡೆದಿದ್ದರು.ಹಾಗೂ ಅವರ ಆಸ್ತಿಯ ನಿವ್ವಳ ಮೊತ್ತ 29.1 ಬಿಲಿಯನ್‌ ಅಮೆರಿಕನ್‌ ಡಾಲರ್‌ ಎಂದು ಹೇಳಲಾಗಿದೆ.

ಹಿಸ್ಸಾರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿತ್ರಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ವೇಳೆ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ, ಮಾಜಿ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ಸೇರಿದಂತೆ ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು