ಬೆಂಗಳೂರಿನಿಂದ ನಂಜನಗೂಡಿಗೆ ಕಾಲ್ನಡಿಗೆಯಲ್ಲಿ ಹೊರಟು ನಂಜುಂಡೇಶ್ವರ ದೇವರ ದರ್ಶನವನ್ನು ನಟ ದುನಿಯಾ ವಿಜಯ್ ಪಡೆದಿದ್ದಾರೆ.
ಸತತ ಐದು ದಿನಗಳ ಕಾಲ ತಮ್ಮ ಸಂಗಡಿಗರ ಜೊತೆ ಹಗಲು ರಾತ್ರಿ ಲೆಕ್ಕಿಸದೇ ಪಾದಯಾತ್ರೆ ಮೂಲಕ ನಟ ದುನಿಯಾ ವಿಜಯ್ ನಂಜನಗೂಡಿಗೆ ಬಂದು ದೇವರ ಕೃಪೆಗೆ ಪಾತ್ರರಾದರು.
ನಟ ದುನಿಯಾ ವಿಜಯ್ ಭೀಮ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಹೊಸ ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಾಟೇರ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾದ ಕೆಲಸದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ.
ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಬೆಂಗಳೂರಿನ ದೇವಸ್ಥಾನದಲ್ಲಿ ಮೊನ್ನೆಯಷ್ಟೇ ಮುಹೂರ್ತವಾಗಿದೆ, ಇನ್ನೂ ಚಿತ್ರಕ್ಕೆ ಹೆಸರು ಇಟ್ಟಿಲ್ಲವಾದರೂ, ಈ ಕಾಂಬಿನೇಷನ್ ನ 2ನೇ ಚಿತ್ರ ಇದಾಗಿದೆ. ಹಾಗಾಗಿ ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ.
ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದರೆ, ದುನಿಯಾ ವಿಜಯ್ ಪುತ್ರಿ ಮೋನಿಕಾ ಈ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಅಪ್ಪನ ನಟನೆಯ 29ನೇ ಸಿನಿಮಾದಲ್ಲಿ ಮಗಳು ಮೋನಿಕಾ ಕೂಡ ನಟಿಸಲಿದ್ದಾರೆ.