News Karnataka Kannada
Tuesday, May 07 2024
ಹರ್ಯಾಣ

ಜಿಮ್‌ನಲ್ಲಿ ಹೃದಯಾಘಾತ: ಜೈಲು ಅಧಿಕಾರಿ​ ಸಾವು

Jail official dies of heart attack at gym
Photo Credit : IANS

ಪಾಣಿಪತ್: ಪಾಣಿಪತ್‌ ಡೆಪ್ಯುಟಿ ಸೂಪರಿಂಟೆಂಡೆಂಟ್ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹರ್ಯಾಣ ಜೈಲು ಉಪ ಅಧೀಕ್ಷಕರಾದ ಜೋಗಿಂದರ್ ದೇಸ್ವಾಲ್ ಮೃತ ದುರ್ದೈವಿ.

ಕರ್ನಾಲ್‌ ಮೂಲದ ಜೋಗಿಂದರ್ ಅವರು ಕಾರಾಗೃಹ ಇಲಾಖೆಗೆ ಸೇರುವ ಮೊದಲು ವಕೀಲರಾಗಿ ಪ್ರಾಕ್ಟೀಸ್​​ ಮಾಡುತ್ತಿದ್ದರು. ಪ್ರಸ್ತುತ ಪಾಣಿಪತ್ ಜೈಲಿನಲ್ಲಿ ನಿಯೋಜಿಸಲಾಗಿದ್ದ 52 ವರ್ಷದ ಡೆಪ್ಯುಟಿ ಸೂಪರಿಂಟೆಂಡೆಂಟ್ ಸೋಮವಾರ ಬೆಳಗ್ಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಕುಸಿದಿದ್ದಾರೆ.

ಸ್ಥಳದಲ್ಲಿ ಸಹೋದ್ಯೋಗಿಗಳು ಅಧಿಕಾರಿಯನ್ನು ಕರ್ನಾಲ್‌ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಜೋಗಿಂದರ್ ದೇಸ್ವಾಲ್ ಮೃತಪಟ್ಟಿದ್ದಾರೆ ಎಂದು ಕುಟುಂಬದ ಹತ್ತಿರದ ಮೂಲಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು