ಹುಬ್ಬಳ್ಳಿ: ದೇವಸ್ಥಾನಕ್ಕೆಂದು ಬಂದ ಮಹಿಳೆ, ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬೈಕ್ ಸವಾರ ಆ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರ ಗಾಯವಾದ ಘಟನೆ ಹುಬ್ಬಳ್ಳಿ ಕೇಶ್ವಾಪುರ ಸರ್ಕಲ್ ಜೈನ್ ದೇವಸ್ಥಾನದ ಮುಂದೆ ನಡೆದಿದ್ದು, ಈ ಎಲ್ಲ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಜೋಶನಾ ಜೈನ್ ಎಂಬ ಮಹಿಳೆ ಬೆಳಗಿನ ಜಾವ ದೇವಸ್ಥಾನಕ್ಕೆಂದು ಬಂದಿದ್ದರು, ಅದೇ ವೇಳೆ ರಸ್ತೆ ದಾಟುತ್ತಿರುವಾಗ, ಬೈಕ್ ಸವಾರ ವೇಗವಾಗಿ ಬಂದು ಆ ಮಹಿಳೆಗೆ ಡಿಕ್ಕಿ ಹೊಡೆದುದರಿಂದ ಮಹಿಳೆ ಕೆಳಗೆ ಬಿದ್ದು, ರಕ್ತ ಕೂಡ ಬಂದಿದೆ. ಕೂಡಲೆ ಅಲ್ಲೆ ಇದ್ದ ಸಾರ್ವಜನಿಕರು ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಬಂದ ಪೂರ್ವ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ. ಬೈಕ್ ಸವಾರ ಮಹಿಳೆಗೆ ಹೇಗೆ ಬಂದು ಗುದ್ದಿದ್ದಾನೆ ಎಂಬುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಜೋಶನಾ ಜೈನ್ ಸ್ಥಿತಿ ಗಂಭೀರವಾಗಿದೆಂದು ತಿಳಿದು ಬಂದಿದೆ.