ದ್ವಾರಕಾ: ಬಾಲಿವುಡ್ ನಟಿ ಕಂಗನಾ ರಣಾವತ್ ಇಂದು(ನ.03) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದು, ಶ್ರೀಕೃಷ್ಣ ಆಶೀರ್ವಾದ ಮಾಡಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಇಂದು ಬೆಳಗ್ಗೆ ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅವರು ಅಲ್ಲಿಗೆ ಬಂದಿದ್ದರು. ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂದು ಸುದ್ದಿಗಾರರು ಕೇಳಿದಾಗ, “ಶ್ರೀ ಕೃಷ್ಣ ಕಿ ಕೃಪಾ ರಹೀ ತೊ ಲಡೆಂಗೆ (ಶ್ರೀಕೃಷ್ಣ ಆಶೀರ್ವಾದ ಮಾಡಿದರೆ ನಾನು ಹೋರಾಡುತ್ತೇನೆ)” ಎಂದು ರನೌತ್ ಹೇಳಿದರು.
ಇನ್ನು 600 ವರ್ಷಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ತಯಾರು ಮಾಡಿದ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರವನ್ನು ಅವರು ಶ್ಲಾಘಿಸಿದರು.
आज बाबा सोमनाथ जी के दर्शन किए, साथ ही स्थानीय कर्मचारियों के सहयोग से सोमनाथ के राम मंदिर में जाना हुआ, वहाँ राम नाम की पुस्तक में राम जी का नाम लिखा, उसके बाद श्री कृष्ण मोक्ष भूमि के दर्शन किए।
सोमनाथ जी के बहुत निकट वो स्थान है जहां श्री कृष्ण जी के पैरों मैं बाण लगा था।
वहीं… pic.twitter.com/OTSHj3kjgI— Kangana Ranaut (@KanganaTeam) November 3, 2023