ಅಹಮದಾಬಾದ್: ಶತಮಾನಗಳಷ್ಟು ಹಳೆಯದಾದ ಪ್ರತಿಮೆಗಳು, ವರ್ಣಚಿತ್ರಗಳು ಸೇರಿದಂತೆ ವಿದೇಶಗಳಿಂದ ಆಮದಾಗಿದ್ದ ಅಮೂಲ್ಯ ವಸ್ತುಗಳನ್ನು ಸಿಬಿಐಸಿ ವಶಪಡಿಸಿಕೊಂಡಿದೆ.
ಗುಜರಾತ್ ಕಚ್ ಜಿಲ್ಲೆಯ ಮುಂದ್ರಾ ಬಂದರಿನಿಂದ ಆಮದು ಮಾಡಿದ ಸರಕುಗಳಿಂದ ಅಂದಾಜು 26.8 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಪ್ರಾಚೀನ ವಸ್ತುಗಳು ಮತ್ತು ಐತಿಹಾಸಿಕ ಕಲಾಕೃತಿಗಳನ್ನು ಕೇಂದ್ರ ಕಂದಾಯ ಗುಪ್ತಚರ ನಿರ್ದೇಶನಾಲಯ ವಶಪಡಿಸಿಕೊಂಡಿದೆ.
ನಿಖರ ಮಾಹಿತಿ ಅನ್ವಯ ಡಿಆರ್ ಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಯುಎಇನ ಜೆಬಿಲ್ ಅಲಿ ಬಂದರಿನಿಂದ ಸರಕು ಆಮದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಮದು ಆದ ವಸ್ತುಗಳಲ್ಲಿ ಹೆಚ್ಚಿನವು ಬ್ರಿಟನ್, ನೆದರ್ಲ್ಯಾಂಡ್ ಸೇರಿದ್ದಾಗಿವೆ. ಈ ವಸ್ತುಗಳಲ್ಲಿ ಪುರಾತನ ಕಲ್ಲು, ಚಿನ್ನ, ಬೆಳ್ಳಿಯಿಂದ ಮಾಡಿದ ಉಪಕರಣಗಳು ಸೇರಿವೆ.
Continuing its resolve to protect global cultural heritage, DRI officers in Gujarat has seized suspected vintage articles, antiques and historical artefacts, estimated to be valued at over Rs. 26.8 crore in the market, from an import consignment. #DRIatWork https://t.co/e2A0tCIyVI pic.twitter.com/a4ClQqcgMc
— CBIC (@cbic_india) September 11, 2023