News Karnataka Kannada
Friday, May 03 2024
ಮನರಂಜನೆ

ಮುಂಬೈ: ಚಲನಚಿತ್ರ ನಿರ್ದೇಶನದ ಸಾಹಸ ವಿವರಿಸಿದ ಕಂಗನಾ

Kangana ranaut describes the adventure of film-making
Photo Credit : IANS

ಮುಂಬೈ: ಚಲನಚಿತ್ರವನ್ನು ನಿರ್ದೇಶಿಸುವ ಸವಾಲುಗಳ ಕುರಿತು ಮಾಹಿತಿ ಹಂಚಿಕೊಂಡಿರುವ ಬಾಲಿವುಡ್ ನಟಿ-ಚಿತ್ರ ನಿರ್ಮಾಪಕಿ ಕಂಗನಾ ರನೌತ್, ನಿರ್ದೇಶಕರು ಪ್ರತಿದಿನ “ಕನಿಷ್ಠ 400-500 ಪ್ರಶ್ನೆಗಳನ್ನು” ಎದುರಿಸುತ್ತಾರೆ ಎಂದು ಹೇಳಿದ್ದಾರೆ.

ಕಂಗನಾ ಇನ್ಸ್ಟಾಗ್ರಾಮ್ ನಲ್ಲಿ ಅಮೇರಿಕನ್ ಚಲನಚಿತ್ರ ನಿರ್ದೇಶಕ ಮಾರ್ಟಿನ್ ಸ್ಕೋರ್ಸೆಸೆ ಅವರ ಸಂದರ್ಶನವನ್ನು ಹಂಚಿಕೊಂಡಿದ್ದಾರೆ, ಅವರು ದೃಶ್ಯವನ್ನು ರೂಪಿಸುವ ಬಗ್ಗೆ ಮಾತನಾಡುವ ವಿವರಣೆ ಅದರಲ್ಲಿದೆ. 2019 ರಲ್ಲಿ ‘ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರದ ಮೂಲಕ ಚಲನಚಿತ್ರಗಳನ್ನು ನಿರ್ದೇಶಿಸಿದ್ದ ನಟಿ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ. ಒಬ್ಬ ನಿರ್ದೇಶಕನಿಗೆ ಪ್ರತಿದಿನ ಕನಿಷ್ಠ 400-500 ಪ್ರಶ್ನೆಗಳು ಎದುರಾಗುತ್ತವೆ. ಕ್ಯಾಮೆರಾ, ಕಲೆ, ನಟರು, ಮೇಕಪ್, ನಿರ್ಮಾಣ ಸೇರಿದಂತೆ ಪ್ರತಿ ವಿಭಾಗದಲ್ಲಿ ಸವಾಲುಗಳು ಎದುರಾಗುತ್ತವೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು