News Karnataka Kannada
Monday, April 29 2024
ದೆಹಲಿ

ಸಭಾಪತಿಗೆ ಕ್ಷಮೆಯಾಚಿಸುವಂತೆ ಸಂಸದ ರಾಘವ್‌ ಚಡ್ಡಾಗೆ ಸಲಹೆ ನೀಡಿದ ಸುಪ್ರೀಂ

SC asks MP Raghav Chadha to apologise to Speaker
Photo Credit : IANS

ನವದೆಹಲಿ: ಸೆಲೆಕ್ಟ್‌ ಕಮಿಟಿ ವಿವಾದಕ್ಕೆ ಸಂಬಂಧಪಟ್ಟಂತೆ ರಾಜ್ಯಸಭಾ ಅಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಜಗದೀಪ್‌ ಧಂಕರ್‌ ಅವರನ್ನು ಭೇಟಿ ಮಾಡಿ ಬೇಷರತ್‌ ಕ್ಷಮೆಯಾಚನೆ ಮಾಡುವಂತೆ ರಾಜ್ಯಸಭಾ ಸಂಸದ ರಾಘವ್‌ ಚಡ್ಡಾ ಅವರಿಗೆ ಸುಪ್ರೀಂ ಕೋರ್ಟ್‌ ಇಂದು(ನ.03) ಸಲಹೆ ನೀಡಿದೆ.

ಆಮ್‌ ಆದ್ಮಿ ಪಾರ್ಟಿಯ ರಾಜ್ಯಸಭಾ ಸಂಸದರ ಕ್ಷಮೆಯಾಚನೆಯನ್ನು ರಾಜ್ಯಸಭಾ ಅಧ್ಯಕ್ಷರು ಕೂಡ ಸಹಾನುಭೂತಿಯಿಂದ ಪರಿಗಣಿಸಬೇಕು ಮತ್ತು ಮುಂದಿನ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅವರು ಸದಸ್ಯರಾಗಿರುವ ಸದನದ ಘನತೆಗೆ ಧಕ್ಕೆ ತರುವ ಉದ್ದೇಶವನ್ನು ಸಂಸದರು ಹೊಂದಿಲ್ಲ ಮತ್ತು ಅವರು ಬೇಷರತ್ ಕ್ಷಮೆ ಯಾಚಿಸಲು ರಾಜ್ಯಸಭಾ ಅಧ್ಯಕ್ಷರೊಂದಿಗೆ ಅಪಾಯಿಂಟ್‌ಮೆಂಟ್ ಕೇಳಲಿದ್ದಾರೆ ಎಂದು ರಾಘವ್‌ ಚಡ್ಡಾ ಅವರನ್ನು ಪ್ರತಿನಿಧಿಸುವ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು ಎಂದು ವರದಿಯಾಗಿದೆ. ದೀಪಾವಳಿ ರಜೆಯ ನಂತರ ನ್ಯಾಯಾಲಯವು ಈಗ ಅರ್ಜಿಯನ್ನು ಆಲಿಸಲಿದೆ.

ಆಗಸ್ಟ್ 11 ರಂದು ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ವಿಶೇಷ ಹಕ್ಕು ಉಲ್ಲಂಘನೆಯ ಆರೋಪದ ಮೇಲೆ ಚಡ್ಡಾ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು