ನವದೆಹಲಿ: ಭಾರತ ಇದೀಗ ವಿಶ್ವದ ಮೊಬೈಲ್ ಹಬ್ ಎಂದು ಕರೆಯುವ ಸ್ಥಾನಮಾನಕ್ಕೆ ತಲುಪಿದೆ. ಇದೀಗ ಈ ವಿಚಾರವೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ನಡುವೆ ಮಾತಿನ ಸಮರಕ್ಕೆ ವೇದಿಕೆಯಾಗಿದೆ. ಈ ಹಿಂದೆ ರಾಹುಲ್ ಗಾಂಧಿ ಹೇಳಿಕೆಯೊಂದನ್ನು ನೀಡಿದ್ದರು. ಭಾರತದಲ್ಲಿ ಮೊಬೈಲ್ ಫೋನ್ಗಳು ಹೆಚ್ಚಾಗಿ ‘ಮೇಡ್ ಇನ್ ಚೈನಾ’ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.
ಈ ಬಗ್ಗೆ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನಾಯಕನನ್ನು ‘ಮೂರ್ಖೋನ್ ಕೆ ಸರ್ದಾರ್’ (ಮೂರ್ಖ ಜನರ ನಾಯಕ) ಎಂದು ಕರೆದಿದ್ದಾರೆ. ಈಗ ₹ 1 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಮೊಬೈಲ್ ಫೋನ್ಗಳನ್ನು ರಫ್ತು ಮಾಡುತ್ತಿದೆ ಎಂದು ಹೇಳಿದ ಮೋದಿ, ಕಾಂಗ್ರೆಸ್ ನಾಯಕರು ಭಾರತದ ಸಾಧನೆಯನ್ನು ನಿರ್ಲಕ್ಷಿಸುವ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಭಾರತದ ಮೊಬೈಲ್ ಫೋನ್ಗಳ ಉತ್ಪಾದನೆಯು ₹20000 ಕೋಟಿಗಿಂತ ಕಡಿಮೆ ಇತ್ತು. ಇಂದು ಭಾರತದ ಉದ್ಯಮವು ₹3.5 ಲಕ್ಷ ಕೋಟಿಗೂ ಅಧಿಕವಾಗಿ ಬೆಳೆದಿದೆ. ಭಾರತವು ₹ 1 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ಗಳನ್ನು ರಫ್ತು ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
देश की उपलब्धियां न देखने की मानसिक बीमारी से ग्रसित कांग्रेस पार्टी और उनके नेता। pic.twitter.com/5xxV4Ux6Xu
— Smriti Z Irani (Modi Ka Parivar) (@smritiirani) November 14, 2023