News Karnataka Kannada
Thursday, May 09 2024
ದೆಹಲಿ

ಭಾರತೀಯ ಸೇನೆಯಲ್ಲಿ ಟ್ರಾನ್ಸ್‌ಜೆಂಡರ್‌ಗಳ ನೇಮಕ ಸಾಧ್ಯತೆ

Transgenders likely to be recruited in Indian Army
Photo Credit : News Kannada

ನವದೆಹಲಿ: ದೇಶದಲ್ಲಿ ತೃತೀಯಲಿಂಗಿಗಳು ಸರ್ಕಾರಿ, ಸರ್ಕಾರೇತರ ಕ್ಷೇತ್ರಗಳಲ್ಲಿ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪುರುಷ ಮಹಿಳೆಯರಿಗೆ ಸಮಾನವಾಗಿದ್ದಾರೆ. ಆದರೆ ಸೇನೆಯಲ್ಲಿ ತೃತೀಯಲಿಂಗಿಗಳು ಸೇವೆ ಸಲ್ಲಿಸುತ್ತಿಲ್ಲ. ಭಾರತವು ಕೂಡ ಇತರ ದೇಶಗಳಂತೆ ತೃತೀಯಲಿಂಗಿಗಳಿಗೆ ಸೇನೆಯಲ್ಲಿ ಅವಕಾಶವನ್ನು ನೀಡಬಹುದು ಎಂದು ಹೇಳಲಾಗಿದೆ.

ಈ ಬಗ್ಗೆ ಒಂದು ಅಧ್ಯಯನವನ್ನು ಮಾಡಿ, ವರದಿ ನೀಡಲು ತಂಡವೊಂದನ್ನು ರಚನೆ ಮಾಡಲಾಗಿದೆ. ಈಗಾಗಲೇ ಅಮೆರಿಕ, ಬ್ರಿಟನ್ ಮತ್ತು ಇಸ್ರೇಲ್ ಸೇರಿದಂತೆ ವಿಶ್ವದ 19 ದೇಶಗಳ ಸೇನೆಗಳಲ್ಲಿ ಟ್ರಾನ್ಸ್‌ಜೆಂಡರ್‌ಗಳನ್ನು ನೇಮಿಸಲಾಗಿದೆ. ಇದೀಗ ಭಾರತದಲ್ಲೂ ಈ ಕ್ರಮವನ್ನು ಅನುಸರಿಸಲು ಆಸಕ್ತಿ ತೋರಿಸಿದೆ.

ಇನ್ನು ಟ್ರಾನ್ಸ್‌ಜೆಂಡರ್​​ಗಳನ್ನು ಸೇನೆಯಲ್ಲಿ ಸೇರಿಸಿಕೊಂಡಿದ ಮೊದಲ ದೇಶ ನೆದರ್ಲ್ಯಾಂಡ್ಸ್. 1974ರಲ್ಲಿ ವಿಶ್ವದಲ್ಲೇ ತೃತೀಯಲಿಂಗಿಗಳನ್ನು ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ ದೇಶ ಎಂಬ ಪ್ರಶಂಸೆಗೆ ಪಾತ್ರವಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು