News Karnataka Kannada
Monday, April 29 2024
ದೆಹಲಿ

ದೆಹಲಿ ಮೆಟ್ರೊದಲ್ಲಿ ತುಂಡುಡುಗೆಯ ಜೂನಿಯರ್‌ ಉರ್ಫಿ, ರೈಲು ನಿಗಮ ಗರಂ

Junior Urfi, Rail Corporation slams Delhi Metro
Photo Credit : IANS

ನವದೆಹಲಿ: ದೆಹಲಿ ಮೆಟ್ರೋದಲ್ಲಿ ತುಂಡುಡುಗೆ ಧರಿಸಿದ ಮಹಿಳೆ ಪ್ರಯಾಣಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದಿನಾಂಕವಿಲ್ಲದ ಕಿರು ಕ್ಲಿಪ್‌ನಲ್ಲಿ, ಇತರ ಮಹಿಳಾ ಪ್ರಯಾಣಿಕರೊಂದಿಗೆ ಕುಳಿತಿದ್ದು, ಆಕೆಯ ಖಾಸಗಿ ಭಾಗಗಳನ್ನು ತೋರ್ಪಡಿಸುವಂತೆ ತೋರುತ್ತಿತ್ತು.

ಈ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ದೆಹಲಿ ಮೆಟ್ರೋ ತನ್ನ ಪ್ರಯಾಣಿಕರು ಸಭ್ಯ ಉಡುಗೆ ತೊಡಬೇಕೆಂದು ನಿರೀಕ್ಷಿಸುತ್ತದೆ ಎಂದು ಹೇಳಿದೆ. ಪ್ರಯಾಣಿಕರು ಇತರ ಪ್ರಯಾಣಿಕರ ಸಂವೇದನೆಗೆ ಧಕ್ಕೆ ತರುವಂತಹ ಯಾವುದೇ ಉಡುಪುಗಳನ್ನು ಧರಿಸಬಾರದು ಎಂದು ಅದು ಹೇಳಿದೆ.
ಇಂತಹ ವರ್ತನೆ ದೆಹಲಿ ಮೆಟ್ರೋ ರೈಲು ನಿಗಮ ನಿರ್ವಹಣೆ ಕುರಿತ ಸೆಕ್ಷನ್ 59 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಹೇಳಿದೆ.

ಬಟ್ಟೆಯ ಆಯ್ಕೆಯಂತಹ ವಿಷಯ ವೈಯಕ್ತಿಕ ವಿಚಾರ. ಆದರೆ ಇತರ ಪ್ರಯಾಣಿಕರ ಸಂವೇದನೆಗೆ ಅಡ್ಡಿ ಬರದ ರೀತಿಯಲ್ಲಿ ವರ್ತಿಸುವುದು ಜವಾಬ್ದಾರಿ ಎಂದು ರೈಲು ನಿಗಮ ಹೇಳಿದೆ.

ಈ ವೀಡಿಯೊವನ್ನು ಮೊದಲಿಗೆ ಎನ್‌ಸಿಎಂಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್‌ನ ಟ್ವಿಟರ್ ಹ್ಯಾಂಡಲ್‌ ಹಂಚಿಕೊಂಡಿದ್ದು, ಮಹಿಳೆ @uorfi_ ಅಲ್ಲ ಎಂಬ ಶೀರ್ಷಿಕೆ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು