ಇಂಫಾಲ್: ಮಣಿಪುರದ ತೆಂಗನೌಪಾಲ್ ಜಿಲ್ಲೆಯ ಸೈಬೋಲ್ ಪ್ರದೇಶದಲ್ಲಿ ಗುರುವಾರ ಅಸ್ಸಾಂ ರೈಫಲ್ಸ್ ವಾಹನ ಗಸ್ತು ತಿರುಗುತ್ತಿದ್ದಾಗ ಶಂಕಿತ ಉಗ್ರರು ಸ್ಫೋಟ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ವಾಹನದಲ್ಲಿ ಹತ್ತು ಅಸ್ಸಾಂ ರೈಫಲ್ಸ್ ಜವಾನರು ಪ್ರಯಾಣಿಸುತ್ತಿದ್ದರು. ಐಇಡಿ ಸ್ಫೋಟದಲ್ಲಿ ಯಾರೂ ಗಾಯಗೊಂಡಿಲ್ಲ. ಸ್ಫೋಟದ ನಂತರ, ಉಗ್ರರು ಕೆಲವು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ಅಸ್ಸಾಂ ರೈಫಲ್ಸ್ ಸೈನಿಕರು ಪ್ರತಿದಾಳಿ ನಡೆಸಿದ್ದಾರೆ.
ಸ್ಫೋಟ ಮತ್ತು ಗುಂಡಿನ ದಾಳಿಯ ನಂತರ, ಉಗ್ರರನ್ನು ಸೆರೆಹಿಡಿಯಲು ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು, ಯಾವುದೇ ಬಂಡುಕೋರರು ಗಾಯಗೊಂಡಿದ್ದಾರೆಯೇ ಅಥವಾ ಸತ್ತಿದ್ದಾರೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.