News Karnataka Kannada
Monday, May 20 2024
ದೆಹಲಿ

ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಸಮಿತಿಗೆ ಸುಧಾಮೂರ್ತಿ ನೇಮಕ

Sudha Murthy appointed to NCERT textbook committee
Photo Credit : News Kannada

ನವದೆಹಲಿ: ಹೊಸ ಪಠ್ಯಪುಸ್ತಕಗಳ ಪರಿಷ್ಕರಣೆ, ರಚನೆಗೆ ಎನ್‌ಸಿಇಆರ್‌ಟಿಯ 19 ಸದಸ್ಯರ ಸಮಿತಿಗೆ ಇನ್ಫೋಸಿಸ್‌ ಸಂಸ್ಥೆ ಸಹ ಸಂಸ್ಥಾಪಕಿ ಹಾಗೂ ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆಯಾದ ಸುಧಾಮೂರ್ತಿ, ಶಂಕರ್ ಮಹಾದೇವನ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಸ್ತೂರಿರಂಗನ್ ನೇತೃತ್ವದ ಸ್ಟೀರಿಂಗ್ ಸಮಿತಿಯು ಅಭಿವೃದ್ಧಿಪಡಿಸಿದ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಪಠ್ಯಕ್ರಮವನ್ನು ಸೇರಿಸಲು ಈ ಸಮಿತಿ ಕೆಲಸ ಮಾಡಲಿದೆ.

ಅಂತಿಮ ಎನ್‍ಸಿಎಫ್-ಎಸ್ಇ ಅನ್ನು ಈಗಾಗಲೇ ಶಿಕ್ಷಣ ಸಚಿವಾಲಯದೊಂದಿಗೆ ಸಲ್ಲಿಸಲಾಗಿದ್ದರೂ, ಅದನ್ನು ಇನ್ನೂ ಸಾರ್ವಜನಿಕ ವಲಯದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಚೌಕಟ್ಟಿನ ಕರಡನ್ನು ಏಪ್ರಿಲ್‍ನಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಮಿತಿಯಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಮಂಜಲ್ ಭಗವ್ ಅವರ ಉಪಾಧ್ಯಕ್ಷತೆಯನ್ನು ಹೊಂದಿದೆ. ಇದರ ಇತರ ಸದಸ್ಯರಲ್ಲಿ ಗಣಿತಜ್ಞ ಸುಜಾಥಾ ರಾಮ್‍ದೊರೈ, ಬ್ಯಾಡ್ಮಿಂಟನ್ ಆಟಗಾರ ಯು ವಿಮಲ್ ಕುಮಾರ್, ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್‍ನ ಎಂಡಿ ಶ್ರೀನಿವಾಸ್, ಮತ್ತು ಅಧ್ಯಕ್ಷರಾಘಿ ಭಾರತೀಯ ಭಾಷಾ ಸಮಿತಿಯ ಕೃಷ್ಣ ಶಾಸ್ತ್ರೀ ಕೂಡ ಇರಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು