News Karnataka Kannada
Thursday, May 02 2024
ದೆಹಲಿ

ಪ್ರಧಾನಿ ಮೋದಿ ಕ್ಸಿ ಜಿನ್‌ಪಿಂಗ್ ಸಂಕ್ಷಿಪ್ತ ಸಂಭಾಷಣೆ, ವಿಡಿಯೋ ವೈರಲ್‌

Pm Modi's brief conversation with Xi Jinping, video goes viral
Photo Credit : IANS

ಹೊಸದಿಲ್ಲಿ: ಜೋಹಾನ್ಸ್‌ಬರ್ಗ್‌ನಲ್ಲಿ ಗುರುವಾರ ನಡೆದ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸಂಕ್ಷಿಪ್ತ ಸಂವಾದ ನಡೆಸಿದರು.

ಸಮ್ಮೇಳನದಲ್ಲಿ ಕಂಡುಬಂದ ವಿಡಿಯೋ ತುಣುಕಿನ ಪ್ರಕಾರ, ಇಬ್ಬರೂ ನಾಯಕರು ತಮ್ಮ ಗೊತ್ತುಪಡಿಸಿದ ಆಸನಗಳತ್ತ ಸಾಗುವಾಗ ಸಂಭಾಷಣೆಯಲ್ಲಿ ತೊಡಗಿಕೊಂಡರು. ಕಳೆದ ವರ್ಷ ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯ ವೇಳೆಯೂ ಮೋದಿ ಮತ್ತು ಕ್ಸಿ ಜಿನ್‌ ಪಿಂಗ್‌ ಶುಭಾಶಯ ವಿನಿಮಯ ಮಾಡಿಕೊಂಡಿದ್ದರು. ಅಲ್ಲದೆ ದ್ವಿಪಕ್ಷೀಯ ಸಂಬಂಧಗಳನ್ನು ಸ್ಥಿರಗೊಳಿಸುವ ಅಗತ್ಯತೆಯ ಬಗ್ಗೆ ಮಾತನಾಡಿದ್ದರು.

ಕಳೆದ ಮೂರು ವರ್ಷಗಳಿಂದ ಭಾರತ ಮತ್ತು ಚೀನಾ ನಡುವೆ ಗಡಿ ವಿವಾದ ಉದ್ವಿಗ್ನವಾಗಿದ್ದು, ಇದೇ ಕಾರಣದಿಂದ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿವೆ. 2020 ರಲ್ಲಿ ಪೂರ್ವ ಲಡಾಖ್‌ನಲ್ಲಿ ಚೀನಾದ ಆಕ್ರಮಣ ನಡೆದಿದ್ದು, 19 ಸುತ್ತಿನ ಮಾತುಕತೆಯ ಬಳಿಕವೂ ಯಾವುದೇ ಒಮ್ಮತದ ನಿರ್ಧಾರವಾಗದೇ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು