News Karnataka Kannada
Friday, May 17 2024
ಕ್ರೀಡೆ

ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್​ನಲ್ಲಿ ಇತಿಹಾಸ ಸೃಷ್ಟಿಸಿದ ಪರಮ್‌ಜೀತ್

Parmjeet wins
Photo Credit : News Kannada

ದುಬೈ: ವಿಶ್ವ ಪ್ಯಾರಾ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಹಿರಿಯ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪರಮ್ ಜೀತ್ ಪಾತ್ರರಾಗಿದ್ದಾರೆ. ಎರಡು ವರ್ಷಗಳ ಹಿಂದೆ ಕಂಚಿನ ಪದಕ ಗೆದ್ದಿದ್ದರು. ಈಗ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಶಕ್ತಿ ಮತ್ತು ದೃಢತೆಯ ಪ್ರದರ್ಶನದಲ್ಲಿ, ಪಂಜಾಬ್ ನ 31 ವರ್ಷದ ಕ್ರೀಡಾಪಟು ಪರಮ್ ಜಿತ್ ಅವರು 150ಕೆಜಿ ಮತ್ತು 157 ಕೆಜಿ ಸೇರಿ ಒಟ್ಟು 462 ಕೆಜಿಯನ್ನು ಯಶಸ್ವಿಯಾಗಿ ಎತ್ತಿದರು. ಇದರ ಆಧಾರದ ಮೇಲೆ ಅವರು ಕೊಲಂಬಿಯಾದ ಪ್ರತಿಸ್ಪರ್ಧಿ ಮೊರೇಲ್ಸ್ ಗೊಲ್ಜಾಜೆಲ್ ಅವರನ್ನು ಸೋಲಿಸಿ ಚಿನ್ನ ಗೆದ್ದರು.

ಪ್ಯಾರಿಸ್ ಪ್ಯಾರಾಲಿಂಪಿಕ್ 2024ರ ಅರ್ಹತಾ ಶ್ರೇಯಾಂಕದಲ್ಲಿ ಪರಮ್ ಜೀತ್ ಅವರು ಅವರು ಆರನೇ ಸ್ಥಾನದಲ್ಲಿದ್ದಾರೆ. ಜೂನ್ 2024ರ ವೇಳೆಗೆ ರ್ಶರೇಯಾಂಕದಲ್ಲಿ ಅಗ್ರ ಎಂಟು ಆಟಗಾರರು ಪ್ಯಾರಿಸ್‍ನ 2024ರ ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು