News Karnataka Kannada
Tuesday, April 30 2024
ದೆಹಲಿ

ದಕ್ಷಿಣ ಆಫ್ರಿಕಾದಿಂದಲೇ ಚಂದ್ರಯಾನ ವೀಕ್ಷಿಸಲಿರುವ ಪ್ರಧಾನಿ ಮೋದಿ

PM Modi to watch Chandrayaan-2 from South Africa
Photo Credit : IANS

ನವದೆಹಲಿ: ಚಂದ್ರಯಾನ ಕುರಿತು ದೇಶವಾಸಿಗಳಲ್ಲಿ ಕುತೂಹಲ ಹೆಚ್ಚಿದೆ. ದೇವಾಲಯ ಮಸೀದಿ, ಚರ್ಚಗಳಲ್ಲಿ ಯಾನಕ್ಕೆ ಯಶಸ್ಸು ಸಿಗಲಿ ಎಂದು ಪ್ರಾರ್ಥನೆ ನಡೆಯುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ 15ನೇ ಬ್ರಿಕ್ಸ್ ಶೃಂಗಸಭೆಗಾಗಿ ಪ್ರಧಾನಿ ಮೋದಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ತಲುಪಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾದಿಂದಲೇ ಮೋದಿ ವರ್ಚುವಲ್ ಆಗಿ ಲ್ಯಾಂಡಿಂಗ್ ವೀಕ್ಷಣೆ ಮಾಡಲಿದ್ದಾರೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಬುಧವಾರ ಸಂಜೆ ಇಳಿಯಲಿರುವ ಚಂದ್ರಯಾನ-3 ನೌಕೆಯನ್ನು ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ಟ್ರಾಕ್‌ ಕೇಂದ್ರದ ವಿಜ್ಞಾನಿಗಳು ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಆ ನೌಕೆ ನಿಗದಿಯಂತೆ ಸುಗಮವಾಗಿ ಚಲಿಸುತ್ತಿರುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ.

ಚಂದ್ರಯಾನ-3 ನೌಕೆಯನ್ನು ಪೀಣ್ಯದ ಇಸ್ಟ್ರಾಕ್‌ ಕೇಂದ್ರದ ಮಿಷನ್‌ ಆಪರೇಷನ್‌ ಕಾಂಪ್ಲೆಕ್ಸ್‌ನಿಂದ ನಿಗಾ ವಹಿಸಲಾಗುತ್ತಿದೆ. ಬುಧವಾರ ನೌಕೆ ಲ್ಯಾಂಡ್‌ ಆಗಲಿರುವ ಹಿನ್ನೆಲೆಯಲ್ಲಿ ಇಸ್ಟ್ರಾಕ್‌ ಕೇಂದ್ರದಲ್ಲಿ ಅತ್ಯುತ್ಸಾಹ ಹಾಗೂ ಬಿರುಸಿನ ಚಟುವಟಿಕೆಗಳು ಕಂಡುಬರುತ್ತಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು