News Karnataka Kannada
Sunday, April 28 2024
ದೆಹಲಿ

ಮೈಕ್ರೋಸಾಫ್ಟ್‌ ವಿಂಡೋಸ್‌ನ ನೂತನ ಮುಖ್ಯಸ್ಥರಾಗಿ ಪವನ್ ದಾವುಲೂರಿ ನೇಮಕ 

ʼಮೈಕ್ರೋಸಾಫ್ಟ್ ವಿಂಡೋಸ್ ಆ್ಯಂಡ್‌ ಸರ್ಫೇಸ್‌ʼ ಸಂಸ್ಥೆಯ  ಹೊಸ ಮುಖ್ಯಸ್ಥರಾಗಿ  ಪವನ್ ದಾವುಲೂರಿ ಅವರು ನೇಮಕಗೊಂಡಿದ್ದಾರೆ.
Photo Credit : NewsKarnataka

ಹೊಸದಿಲ್ಲಿ: ʼಮೈಕ್ರೋಸಾಫ್ಟ್ ವಿಂಡೋಸ್ ಆ್ಯಂಡ್‌ ಸರ್ಫೇಸ್‌ʼ ಸಂಸ್ಥೆಯ  ಹೊಸ ಮುಖ್ಯಸ್ಥರಾಗಿ  ಪವನ್ ದಾವುಲೂರಿ ಅವರು ನೇಮಕಗೊಂಡಿದ್ದಾರೆ.

ಐಐಟಿ ಮದ್ರಾಸಿನ ಹಳೆಯ ವಿದ್ಯಾರ್ಥಿಯಾಗಿರುವ ಪವನ್‌ ಅವರು ಗೂಗಲ್‌ನ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ ಅವರಂತೆ ಬಿಗ್ ಟೆಕ್ ಕಂಪನಿಗಳ ನಾಯಕತ್ವವನ್ನು ವಹಿಸಿದ ಇತ್ತೀಚಿನ ಭಾರತೀಯರಾಗಿದ್ದಾರೆ.

ಮೈಕ್ರೋಸಾಫ್ಟ್‌ ವಿಂಡೋಸ್‌ ತೊರೆದು ಅಮೆಜಾನ್‌ಗೆ ಸೇರಿಕೊಂಡಿರುವ ದೀರ್ಘಕಾಲದ ಮುಖ್ಯಸ್ಥ ಪನೋಸ್ ಪನಾಯ್ ಅವರಿಂದ ದಾವುಲೂರಿ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಹಿಂದೆ ದಾವುಲೂರಿ ಅವರು ಸರ್ಫೇಸ್ ಗುಂಪನ್ನು ಮುನ್ನಡೆಸಿದ್ದರು. ಮಿಖಾಯಿಲ್ ಪರಖಿನ್ ವಿಂಡೋಸ್ ವಿಭಾಗದ ಮುಖ್ಯಸ್ಥರಾಗಿದ್ದರು.

ಮೈಕ್ರೋಸಾಫ್ಟ್‌ನ ಎಕ್ಸ್‌ಪೀರಿಯೆನ್ಸಸ್‌ ಆ್ಯಂಡ್‌ ಡಿವೈಸಸ್‌ ವಿಭಾಗ ಮುಖ್ಯಸ್ಥ ರಾಜೇಶ್ ಝಾ ಅವರು ಈ ಕುರಿತು ಆಂತರಿಕ ನೋಟೀಸ್‌ ನೀಡಿದ್ದಾರೆ. ಸಂಸ್ಥೆಯಲ್ಲಿನ ಹೊಸ ನಾಯಕತ್ವ ಶ್ರೇಣಿಯನ್ನು ವಿವರಿಸಿದ್ದಾರೆ. ಈ ನಿರ್ಧಾರವು ಸಂಸ್ಥೆಯು ಎಐ ಯುಗದಲ್ಲಿ ತನ್ನ ನೂತನ ಗ್ಯಾಜೆಟ್‌ಗಳನ್ನು, ವರ್ಚುವಲ್‌ ಅನುಭವದ ಸಾಧನಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ದಾವುಲುರಿ ಮೈಕ್ರೋಸಾಫ್ಟ್‌ನಲ್ಲಿ 23 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಸರ್ಫೇಸ್‌ಗಾಗಿ ಪ್ರೊಸೆಸರ್‌ಗಳನ್ನು ರಚಿಸಲು ಕ್ವಾಲ್ಕಾಮ್ ಮತ್ತು ಎಎಮ್‌ಡಿಯೊಂದಿಗೆ ಅದರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು