News Karnataka Kannada
Friday, May 03 2024
ದೆಹಲಿ

ಪುಣೆಯಲ್ಲಿ ನಿರ್ಮಾಣವಾಗಲಿದೆ ಅತೀ ಎತ್ತರದ ಪ್ರಧಾನಿ ಮೋದಿ ಪ್ರತಿಮೆ

pm statue
Photo Credit : Twitter

ನವದೆಹಲಿ: ಗುಜರಾತ್‌ನ ನರ್ಮದಾ ನದಿ ತೀರದಲ್ಲಿ ನಿರ್ಮಿಸಿರುವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಪ್ರತಿಮೆ, ಏಕತಾ ಮೂರ್ತಿಗಿಂತ ಎತ್ತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆಯು ಪುಣೆ ಬಳಿಯ ಲವಾಸ ನಗರದಲ್ಲಿ ನಿರ್ಮಾಣವಾಗಲಿದೆ. ಆದರೆ ಇದು ಸರ್ಕಾರದ ಯೋಜನೆ ಅಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದಿಂದಾಗಿ ಖ್ಯಾತ ಕಂಪನಿ ಡಾರ್ವಿನ್‌ ಪ್ಲಾಟ್‌ಫಾರ್ಮ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ನಿಂದ ಪ್ರತಿಮೆ ನಿರ್ಮಿಸಲು ತೀರ್ಮಾನಿಸಿದೆ.

ಏಕತಾ ಮೂರ್ತಿಯು 182 ಮೀಟರ್‌ ಎತ್ತರ ಹೊಂದಿದೆ. ಆದರೆ, ನರೇಂದ್ರ ಮೋದಿ ಮೂರ್ತಿಯು 190-200 ಮೀಟರ್‌ ಇರಲಿದೆ. ಹಾಗಾಗಿ, ಇದು ವಿಶ್ವದಲ್ಲೇ ಎತ್ತರದ ಮೂರ್ತಿ ಎಂಬ ಖ್ಯಾತಿಗೆ ಭಾಜನವಾಗಲಿದೆ. 2023ರ ಡಿಸೆಂಬರ್‌ 31ರಂದು ಮೂರ್ತಿಯನ್ನು ಅನಾವರಣಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ದೇಶಕ್ಕೆ ಮೋದಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ದೃಷ್ಟಿಯಿಂದಾಗಿ ಬೃಹತ್‌ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ” ಎಂದು ಡಿಪಿಐಎಲ್‌ ಮುಖ್ಯ ವ್ಯವಸ್ಥಾಪಕ ನಿರ್ದೇಶಕ  ಅಜಯ್‌ ಹರಿನಾಥ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು