News Karnataka Kannada
Thursday, May 02 2024
ದೆಹಲಿ

ದೆಹಲಿ: ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

Covid Vaccine
Photo Credit : News Kannada

ದೆಹಲಿ: ದೇಶದಲ್ಲಿ ಮತ್ತೆ ಹೊಸ ಕೋವಿಡ್‌ ಸೋಂಕಿನ ಅಲೆ ಭೀತಿ ಕಾಣಿಸಿಕೊಂಡಿರುವ ಹೊತ್ತಿನಲ್ಲೇ, ಮೂಗಿನ ಮೂಲಕ ಪಡೆಯಬಹುದಾದ ಕೋವಿಡ್‌ ಲಸಿಕೆಯನ್ನು ಬೂಸ್ಟರ್‌ ಡೋಸ್‌ ಆಗಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಹೀಗಾಗಿ ಮೊದಲ ಎರಡು ಡೋಸ್‌ ಆಗಿ ಕೋವಿಶೀಲ್ಡ್‌ ಅಥವಾ ಕೋವ್ಯಾಕ್ಸಿನ್‌ ಪೈಕಿ ಯಾವುದೇ ಲಸಿಕೆ ಪಡೆದ, 18 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಬೂಸ್ಟರ್‌ ಡೋಸ್‌ ಆಗಿ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಇನ್‌ಕೋವ್ಯಾಕ್‌ ಇಂಟ್ರಾನಾಸಲ್‌ ವ್ಯಾಕ್ಸಿನ್‌ ಪಡೆಯಬಹುದು.

ಆದರೆ ಮೊದಲ ಹಂತದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರವೇ ಇನ್‌ಕೋವ್ಯಾಕ್‌ ಲಭ್ಯವಿರಲಿದ್ದು, ಶೀಘ್ರವೇ ಇದನ್ನು ರಾಷ್ಟ್ರೀಯ ಕೋವಿಡ್‌ ಲಸಿಕಾ ಯೋಜನೆಯ ಭಾಗವಾಗಿ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಹೀಗಾಗಿ ತಕ್ಷಣಕ್ಕೆ ಈ ಲಸಿಕೆ ಬೇಕಾದವರು ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಿಯೇ ಪಡೆದುಕೊಳ್ಳಬೇಕು. ಕೋವಿನ್‌ ವೆಬ್‌ಸೈಟ್‌ನಲ್ಲಿ ಇನ್‌ಕೋವ್ಯಾಕ್‌ ಲಸಿಕೆಯ ಮಾಹಿತಿ ಹಾಕಲಾಗಿದ್ದು, ಬೇಕಾದವರು ಲಸಿಕೆಗೆ ಬುಕ್‌ ಮಾಡಿಕೊಳ್ಳಬಹುದು.

ಸೇಂಟ್‌ ಲೂಯಿಸ್‌ನ ವಾಷಿಂಗ್ಟನ್‌ ವಿವಿಯ ಸಹಯೋಗದಲ್ಲಿ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ಬಿಬಿವಿ154 ಎಂದು ಹೆಸರಿಸಲಾಗಿದ್ದು, ಕಳೆದ ನವೆಂಬರ್‌ನಲ್ಲೇ ಇದನ್ನು 18 ವರ್ಷ ಮೇಲ್ಪಟ್ಟವರಿಗೆ ತುರ್ತು ಬಳಕೆ ಮಾಡಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮತಿ ನೀಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು