News Karnataka Kannada
Monday, April 29 2024
ದೆಹಲಿ

ನವದೆಹಲಿ: ಮಹಾತ್ಮಾ ಗಾಂಧಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ

PM Modi pays tributes to Mahatma Gandhi, urges all to buy khadi
Photo Credit : IANS

ನವದೆಹಲಿ, ಅ.2: ಮಹಾತ್ಮಾ ಗಾಂಧಿ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅವರಿಗೆ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಗಾಂಧಿ ಅವರಿಗೆ ಗೌರವ ಸಲ್ಲಿಸಲು ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನು ಖರೀದಿಸುವಂತೆ ಜನರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಮಹಾತ್ಮಾ ಗಾಂಧಿ ಅವರ ಬಗ್ಗೆ ತಮ್ಮ ಆಲೋಚನೆಗಳ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಂಡು ಇಂದು ಅವರ ಜನ್ಮ ವಾರ್ಷಿಕೊತ್ಸವದಲ್ಲಿ ಅವರ ಸರಳತೆ ಮತ್ತು ದೇಶ ಸೇವೆಯ ಬದ್ದತೆ ಅಜರಾಮರ ಎಂದು ಇಬ್ಬರು ಮಹನೀಯರಿಗೆ ಶ್ರದ್ಧಾಂಜಲಿ ಅರ್ಪಿಸಿ ದ್ದಾರೆ.

ಈ ಗಾಂಧಿ ಜಯಂತಿ ಇನ್ನಷ್ಟು ವಿಶೇಷವಾಗಿದೆ ಏಕೆಂದರೆ ಭಾರತವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ . ಅವರ ಆದರ್ಶಗಳನ್ನು ಯಾವಾಗಲೂ ಪಾಲಿಸಬೇಕು ಎಂದು . ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ ,ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನುಹೆಚ್ಚಾಗಿ ಖರೀದಿಸಿ ಸಂಭ್ರಮಿಸಿ ಎಂದು ಟ್ವೀಟ್ ಮಾಡಿದ್ದಾರೆ.

ನಮ್ಮ ಇತಿಹಾಸದ ಅತ್ಯಂತ ನಿರ್ಣಾಯಕ ಸಮಯದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಕಠಿಣ ನಾಯಕತ್ವವು ಯಾವಾಗಲೂ ಸ್ಮರಣೀಯವಾಗಿದೆ.ಅವರಿಗೆ ದೇಶದ ಜನತೆ ಸದಾ ನೆನೆಯುತ್ತಾರೆ ಅವರಿಗೆ ಬಾವಪೋರ್ಣ ನಮನ ಎಂದು ಹೇಳಿ ಶಾಸ್ತ್ರಿಯವರ ಜೀವನ ಪಯಣ ಮತ್ತು ಸಾಧನೆಗಳನ್ನು ಪ್ರದರ್ಶಿಸುವ ದೆಹಲಿಯ ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿನ ಅವರ ಗ್ಯಾಲರಿಯಿಂದ ಕೆಲವು ಚಿತ್ರಗಳನ್ನು ಪ್ರಧಾನಿ ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು