ನವದೆಹಲಿ : ಬೋಧನೆಯಲ್ಲಿ ವೃತ್ತಿಯನ್ನು ಮಾಡಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಗೆ (CTET) ಅರ್ಜಿ ಸಲ್ಲಿಸಲು ಕೇವಲ ಒಂದು ದಿನ ಮಾತ್ರ ಇದೆ. ಏಕೆಂದರೆ ನೋಂದಣಿ ಪ್ರಕ್ರಿಯೆ ಮಂಗಳವಾರ (ಅಕ್ಟೋಬರ್ 19) ಕ್ಕೆ ಮುಗಿಯಲಿದೆ.
ಮಹತ್ವಾಕಾಂಕ್ಷೆಯ ಅಭ್ಯರ್ಥಿಗಳು ಸಿಟಿಇಟಿಯ ಅಧಿಕೃತ ವೆಬ್ಸೈಟ್ (https://ctet.nic.in) ಮೂಲಕ 11:59 PM ಗಿಂತ ಮೊದಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಆದಾಗ್ಯೂ, ಶುಲ್ಕವನ್ನು ಅಕ್ಟೋಬರ್ 20 (3:30 PM) ವರೆಗೆ ಪಾವತಿಸಬಹುದು.ಸೆಪ್ಟೆಂಬರ್ 20 ರಂದು ಆನ್ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿತ್ತು.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 15 ನೇ ಆವೃತ್ತಿಯ CTET ಯನ್ನು CBT (ಕಂಪ್ಯೂಟರ್ ಆಧಾರಿತ ಪರೀಕ್ಷೆ) ಕ್ರಮದಲ್ಲಿ ಡಿಸೆಂಬರ್ 16, 2021 ರಿಂದ ಜನವರಿ 13, 2022 ರ ನಡುವೆ ನಡೆಸಲು ನಿರ್ಧರಿಸಲಾಗಿದೆ.ಪ್ರವೇಶ ಪತ್ರ ಬಿಡುಗಡೆಗೆ ನಿಖರವಾದ ದಿನಾಂಕವನ್ನು ತಿಳಿಸಲಾಗುವುದು ಎಂದು ತಿಳಿಸಲಾಗಿದೆ
ಪರೀಕ್ಷೆಯು, ವಿಶೇಷವಾಗಿ, ದೇಶಾದ್ಯಂತ 20 ಭಾಷೆಗಳಲ್ಲಿ ನಡೆಯಲಿದೆ.