ಪಶ್ಚಿಮ ಬಂಗಾಳ: ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿದೆ. ವಿಮಾನ ನಿಲ್ದಾಣದ ಸಂಕೀರ್ಣದ ವಿವಿಧ ಸ್ಥಳಗಳಲ್ಲಿ ಬಾಂಬ್ಗಳನ್ನು ಇರಿಸಲಾಗಿದೆ ಎಂದು ಇ-ಮೇಲ್ ಮೂಲಕ ಎಚ್ಚರಿಕೆ ನೀಡಲಾಗಿತ್ತು. ಬೆನ್ನಲ್ಲೇ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಶೋಧ ಕಾರ್ಯ ಬಳಿಕ ಇದೊಂದು ಫೇಕ್ ಬೆದರಿಕೆ ಎಂದು ಸಮಾಧಾನಗೊಂಡಿದ್ದಾರೆ.
ಕಳೆದ ದಿನ ಮಧ್ಯಾಹ್ನ 12.55ಕ್ಕೆ ಬಾಂಬ್ ಸ್ಫೋಟ ಆಗುವ ಬಗ್ಗೆ ಇ-ಮೇಲ್ನಲ್ಲಿ ತಿಳಿಸಿದ್ದರು. ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಇಟ್ಟ ತಂಡವೇ ಬಾಂಬ್ ಇಟ್ಟಿದೆ. ಇದೀಗ ಅದಕ್ಕಿಂತ ದೊಡ್ಡ ಬಾಂಬ್ಗಳನ್ನು ಇಡಲಾಗಿದೆ. ಒಂದೆಲ್ಲ, ಎರಡಲ್ಲ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಬಾಂಬ್ ಇಡಲಾಗಿದೆ. ಎಲ್ಲಾ ಬಾಂಬ್ಗಳು ಮಧ್ಯಾಹ್ನ 12.55 ಕ್ಕೆ ಸ್ಫೋಟಗೊಳ್ಳುತ್ತವೆ ಎಂದು ಮೇಲ್ನಲ್ಲಿ ತಿಳಿಸಲಾಗಿತ್ತು ಎಂದು ಹೇಳಿದೆ.
ಇನ್ನು ವಿಮಾನ ನಿಲ್ದಾಣದ ಅಧಿಕಾರಿಗಳು, ಸಿಐಎಸ್ಎಫ್ ಮತ್ತು ಪಶ್ಚಿಮ ಬಂಗಾಳದ ಪೊಲೀಸರು ಇ-ಮೇಲ್ ಕಳುಹಿಸಿದವರ ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದಾರೆ.