News Karnataka Kannada
Friday, May 03 2024
ದೆಹಲಿ

ಅಯೋಧ್ಯೆ ರಾಮಮಂದಿರ ಉದ್ಘಾಟನೆ: ನಟ ರಿಷಬ್‌ ಶೆಟ್ಟಿಗೆ ಆಹ್ವಾನ

Actor Rishab Shetty invited for inauguration of Ram temple in Ayodhya
Photo Credit : News Kannada

ನವದೆಹಲಿ: ಅಯೋಧ್ಯಯ ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಅದೇ ರೀತಿ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಕೆಲವೇ ಕೆಲವರು ನಟ ನಟಿಯರನ್ನು ಆಹ್ವಾನಿಸಿದ್ದು, ಕನ್ನಡದಲ್ಲಿ ರಿಷಬ್ ಶೆಟ್ಟಿ ಅವರಿಗೆ ಇಂಥದ್ದೊಂದು ಅವಕಾಶ ಸಿಕ್ಕಿದೆ. ರಾಮಮಂದಿರ ಉದ್ಘಾಟನೆಗೆ ರಿಷಬ್ ಶೆಟ್ಟಿ ಅವರನ್ನು ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ರಜನಿಕಾಂತ್, ಮೋಹನ್ ಲಾಲ್, ಚಿರಂಜೀವಿ ಸೇರಿದಂತೆ ಕೆಲವೇ ಕೆಲವು ನಟರಿಗೆ ಇಂಥದ್ದೊಂದು ಆಹ್ವಾನ ಸಿಕ್ಕಿದೆ.

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುತ್ತಿದ್ದು, ಗ್ರಾಮ ಗ್ರಾಮಗಳಲ್ಲಿ ಕಾರ್ಯಕ್ರಮ ಪೂಜೆ ಪುನಸ್ಕಾರ ಆಯೋಜನೆಗೊಂಡಿದೆ. ಇದರ ಭಾಗವಾಗಿ ಬೆಂಗಳೂರಿನ ಬನಶಂಕರಿ ಒಂದನೇ ಹಂತದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೆ ಘಂಟಾದಾನ ಸಮರ್ಪಣೆ ಮಾಡಿದ್ದಾರೆ.

2.5 ಟನ್ ತೂಕದ ಘಂಟೆಗಳು, 30 ಸಣ್ಣ ಗಂಟೆಗಳು, 38 ಕೆಜಿ ತೂಕದ ಬೆಳ್ಳಿಯ ಸಾಮಾನುಗಳನ್ನು ಸಮರ್ಪಣೆ ಮಾಡಲಾಗಿದೆ. ಈ ಘಂಟಾದಾನ ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಭಾಗಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು