News Karnataka Kannada
Thursday, May 02 2024
ದೆಹಲಿ

ದೆಹಲಿ: ಸಂಸತ್ ಕಲಾಪವನ್ನು ಕನ್ನಡದಲ್ಲಿ ಕೇಳುವುದು ಹೇಗೆ ಗೊತ್ತಾ

Parliament to be in session from December 4 to 22
Photo Credit : By Author

ದೆಹಲಿ: ಇತ್ತೀಚೆಗಷ್ಟೆ ಬರೋಬ್ಬರಿ 971 ಕೋಟಿ ರೂ. ವೆಚ್ಚದಲ್ಲಿ ಭವ್ಯ ನೂತನ ಸಂಸತ್ ಭವನ ನಿರ್ಮಾಣವಾಗಿ ಲೋಕಾರ್ಪಣೆ ಗೊಂಡಿತ್ತು.ಇದೀಗ ಇನ್ನೊಂದು ವಿಶೇಷತೆಯನ್ನೊಳಗೊಂಡು ಇದು ಇನ್ನೂ ಹತ್ತಿರವಾಗಲಿದೆ.

ಹೌದು,ಇಲ್ಲಿಯವರೆಗೆ ಸಂಸತ್‌ ಸದಸ್ಯರು ಸದನದಲ್ಲಿ ನಡೆಯುವ ಚರ್ಚೆಗಳನ್ನು ಹಿಂದಿ ,ಇಂಗ್ಲೀಷ್ ನಲ್ಲಿಯೇ ಕೇಳಬೇಕಾಗಿತ್ತು.ಆದರೆ ಇನ್ನು ಮುಂದೆ ಕನ್ನಡ ಸೇರಿದಂತೆ ತಮ್ಮ ತಮ್ಮ ಪ್ರಾದೇಶಿಕ ಭಾಷೆಗಳಲ್ಲೇ ಆಲಿಸಬಹುದಾಗಿದೆ!.

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಪ್ರಸ್ತಾಪಿಸಿರುವ ಈ ಪರಿಕಲ್ಪನೆ ಅನುಷ್ಠಾನಗೊಂಡರೆ ಹೊಸ ಸಂಸತ್‌ ಭವನದಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಭಾರತೀಯ ಭಾಷೆಗಳ ಉತ್ತೇಜನದ ಜೊತೆಗೆ ಇದು ಸಂಸದರಿಗೂ ಅನುಕೂಲವಾಗಲಿದೆ.cಸಂವಿಧಾನದ 8ನೇ ಪರಿಚ್ಛೇದದಲ್ಲಿ ಬರುವ ಎಲ್ಲ 22 ಭಾಷೆಗಳಲ್ಲೂ ತತ್‌ಕ್ಷಣದಲ್ಲೇ ದ್ವಿಮುಖ ವ್ಯಾಖ್ಯಾನ ಸೌಲಭ್ಯ(ಏಕಕಾಲಕ್ಕೆ ಭಾಷಾಂತರ ಪ್ರಕ್ರಿಯೆ)ವನ್ನು ಕಲ್ಪಿಸುವ ಕುರಿತು ಜೂ.28ರಂದು ಲೋಕಸಭಾ ಕಾರ್ಯಾಲಯವು ಸುತ್ತೋಲೆಯೊಂದನ್ನು ಹೊರಡಿಸಿದ್ದು, ಆರಂಭದಲ್ಲಿಯೇ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಇದನ್ನು ಪರೀಕ್ಷಿಸುವಂತೆ ಉದ್ಯೋಗಿಗಳಿಗೆ ಆಹ್ವಾನವನ್ನೂ ನೀಡಿದೆ ಅನ್ನೋದು ವಿಶೇಷ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು