ದೇಶೀಯ ವಿಮಾನಯಾನ ಸಂಸ್ಥೆಗಳು ಶೇ. 85ರಷ್ಟು ಪ್ರಮಾಣದಲ್ಲಿ ವಿಮಾನಗಳ ಹಾರಾಟ ನಡೆಸಬಹುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಈ ಮೊದಲು ಅಂದರೆ ‘ಆಗಸ್ಟ್ 12ರವರೆಗೆ ವಿಮಾನಯಾನ ಸಂಸ್ಥೆಗಳು ಶೇ. 72.5ರಷ್ಟು ಪ್ರಮಾಣದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದವು. ಜುಲೈ 5ರಿಂದ ಆಗಸ್ಟ್ 12ರವರೆಗೆ ಈ ಪ್ರಮಾಣವು ಶೇ. 64 ಹಾಗೂ ಜೂನ್ 1ರಿಂದ ಜುಲೈ 5ರವರೆಗೆ ಈ ಪ್ರಮಾಣವು ಶೇ 50ರಷ್ಟು ಇತ್ತು. ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್ ಪ್ರಮಾಣ ತಗ್ಗುತ್ತಿರುವ ಹಿನ್ನೆಲೆ ಶೇ. 85ರಷ್ಟು ಪ್ರಮಾಣದಲ್ಲಿ ವಿಮಾನಯಾನಕ್ಕೆ ಅನುಮತಿ ನೀಡಿದೆ.