News Karnataka Kannada
Friday, May 03 2024
ದೆಹಲಿ

ವಿಮಾನದ ಶೌಚಾಲಯದಲ್ಲಿ ನವಜಾತ ಶಿಶು ಪತ್ತೆ, ಶಂಕಿತ ಮಹಿಳೆ ಬಂಧನ

Uttara Kannada: 2-year-old boy dies after consuming mosquito repellent liquid
Photo Credit :

ಹೊಸದಿಲ್ಲಿ : ರಕ್ತದಿಂದ ತೊಯ್ದಿದ್ದ ಟಾಯ್ಲೆಟ್ ಪೇಪರ್‌ನಲ್ಲಿ ಸುತ್ತಿದ ನವಜಾತ ಶಿಶುವೊಂದನ್ನು ವಿಮಾನದ ಶೌಚಾಲಯದಲ್ಲಿ ಬಿಟ್ಟು ಹೋದ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ಈ ಪ್ರಕರಣ ಪತ್ತೆಯಾಗಿದ್ದು, ಮಗುವನ್ನು ರಕ್ಷಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಏರ್ ಮರೀಷಿಯಸ್ ವಿಮಾನದಲ್ಲಿ 20 ವರ್ಷ ವಯಸ್ಸಿನ ಮಹಿಳೆ ಮಗುವಿಗೆ ಜನ್ಮ ನೀಡಿರಬೇಕು ಎಂದು ಶಂಕಿಸಲಾಗಿದೆ. ಈ ವಿಮಾನ ಸೀವೂಸಾಗುರ್ ರಂಗೂಲಮ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನವರಿ 1ರಂದು ಇಳಿದಿದ್ದು, ಶಂಕಿತ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಮಗು ಈಗ ಆರೋಗ್ಯವಾಗಿದೆ ಎಂದು ವರದಿ ತಿಳಿಸಿದೆ. ಸಾಮಾನ್ಯವಾಗಿ ನಿರ್ವಹಿಸುವ ಕಸ್ಟಮ್ಸ್ ತಪಾಸಣೆ ವೇಳೆ ಶೌಚಾಲಯದಲ್ಲಿ ಮಗು ಪತ್ತೆಯಾಗಿದೆ ಎಂದು ಸಿಟೀಸ್ ನ್ಯೂಸ್‌ ರೂಮ್ ವರದಿಯಲ್ಲಿ ಹೇಳಲಾಗಿದೆ.

ಶೌಚಾಲಯದಲ್ಲಿ ರಕ್ತಸಿಕ್ತವಾಗಿದ್ದ ಟಾಯ್ಲೆಟ್ ಪೇಪರ್‌ಗಳು ಇದ್ದುದನ್ನು ಕಂಡ ಅಧಿಕಾರಿಗಳು, ಕಾಗದದಲ್ಲಿ ಸುತ್ತಿದ್ದ ಮಗುವನ್ನು ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರು. ಶಂಕಿತ ತಾಯಿ ಆರಂಭದಲ್ಲಿ ಈ ಗಂಡುಮಗು ತನ್ನದು ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದು, ವೈದ್ಯಕೀಯ ತಪಾಸಣೆ ಬಳಿಕ, ಆಕೆಯೇ ಮಗುವಿಗೆ ಜನ್ಮ ನೀಡಿರುವುದು ದೃಢಪಟ್ಟಿತು ಎಂದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು