News Karnataka Kannada
Wednesday, May 15 2024
ದೆಹಲಿ

2020ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ 47,984 ಮಂದಿ ಬಲಿ

Woman killed in accident, son Ashwin and husband critically injured
Photo Credit :

ಹೊಸದಿಲ್ಲಿ : ಎಕ್ಸ್ ಪ್ರೆಸ್ ವೇ ಸೇರಿದಂತೆ ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ 2020ರಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಸುಮಾರು 47,984 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಸರಕಾರವು ಗುರುವಾರ ಲೋಕಸಭೆಗೆ ತಿಳಿಸಿದೆ.

2019ರಲ್ಲಿ ಎಕ್ಸ್ ಪ್ರೆಸ್ ವೇ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆದ ರಸ್ತೆ ಅವಘಡಗಳಿಗೆ 53,872 ಮಂದಿ ಬಲಿಯಾಗಿದ್ದರು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು. ವಾಹನಗಳ ವಿನ್ಯಾಸ ಹಾಗೂ ಸ್ಥಿತಿ, ರಸ್ತೆ ಎಂಜಿನಿಯರಿಂಗ್‌ ನ ಲೋಪ, ವೇಗದ ಚಾಲನೆ, ಮದ್ಯ ಅಥವಾ ಮಾದಕದ್ರವ್ಯ ಸೇವಿಸಿ ವಾಹನಗಳ ಚಾಲನೆ, ತಪ್ಪು ಬದಿಯಲ್ಲಿ ವಾಹನ ಚಾಲನೆ, ಕೆಂಪು ದೀಪವನ್ನು ಲೆಕ್ಕಿಸದೆ ವಾಹನ ಚಾಲನೆ, ಮೊಬೈಲ್ ಫೋನುಗಳ ಬಳಕೆ ಇತ್ಯಾದಿ ಅಂಶಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುವ ಅವಘಡಗಳಿಗೆ ಮುಖ್ಯ ಕಾರಣಗಳಾಗಿವೆ ಎಂದವರು ಸದನಕ್ಕೆ ತಿಳಿಸಿದರು.

ಸ್ವತಂತ್ರ ರಸ್ತೆ ಸುರಕ್ಷತಾ ತಜ್ಞರನ್ನು ಒಳಪಡಿಸುವ ಮೂಲಕ ರಸ್ತೆ ವಿನ್ಯಾಸ ಹಂತ, ನಿರ್ಮಾಣ ಹಂತ ಸೇರಿದಂತೆ ಹೆದ್ದಾರಿ ಕಾಮಗಾರಿಯ ಎಲ್ಲಾ ಹಂತಗಳಲ್ಲಿಯೂ ರಸ್ತೆ ಸುರಕ್ಷತೆಯನ್ನು ಸುಧಾರಣೆಗೊಳಿಸುವುದಕ್ಕಾಗಿ ತನ್ನ ಸಚಿವಾಲಯವು ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿದೆಯೆಂದು ಸಚಿವರು ಮಾಹಿತಿ ನೀಡಿದರು.

2021ರ ಮಾರ್ಚ್-ಎಪ್ರಿಲ್‌ನಲ್ಲಿ ದ್ರವರೂಪದ ವೈದ್ಯಕೀಯ ಆಮ್ಲಜನಕದ ಟ್ಯಾಂಕರ್ ಗಳನ್ನು ನಿರ್ವಹಿಸಲು ತಾಂತ್ರಿಕವಾಗಿ ತರಬೇತಿ ಪಡೆದ ಚಾಲಕರ ಕೊರತೆಯಿರುವುದು ವರದಿಯಾಗಿತ್ತೆಂದು ಗಡ್ಕರಿ ಸದನಕ್ಕೆ ಇನ್ನೊಂದು ಪ್ರಶ್ನೆಗೆ ನೀಡಿದ ಉತ್ರದಲ್ಲಿ ತಿಳಿಸಿದರು.

2016ರಿಂದ 2018ರ ನಡುವಿನ ಅವಧಿಯಲಿ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು 5803 ಅಪಾಯಕಾರಿ ರಸ್ತೆಗುಂಡಿಗಳನ್ನು ಗುರುತಿಸಲಾಗಿದೆಯೆಂದು ಗಡ್ಕರಿ ಮತ್ತೊಂದು ಪ್ರಶ್ನೆಗೆ ನೀಡಿದ ಉತ್ತರದಲ್ಲಿ ತಿಳಿಸಿದರು.

ದಿಲ್ಲಿ, ಮಧ್ಯಪ್ರದೇಶ , ಒಡಿಸಾ, ರಾಜಸ್ಥಾನ ಹಾಗೂ ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯ ಅಥವಾ ಕೇಂದ್ರಾಡಳಿತದಲ್ಲಿ ವಾಹನಗಳು, ಮೊಬೈಲ್ ಫೋನ್‌ಗಳು ಹಾಗೂ ದಾಖಲೆಗಳ ಕಳವು ಕುರಿತ ದೂರುಗಳನ್ನು ಆನ್ ಲೈನ್ ನಲ್ಲಿ ಆಯಾ ರಾಜ್ಯಗಳ ಪೌರ ಸೇವಾ ಪೋರ್ಟಲ್‌ಗಳ ಮೂಲಕ ಸಲ್ಲಿಸಲು ಇ-ಎಫ್‌ಐಆರ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ನಿತಿನ್ ಗಡ್ಕರಿ ಸದನಕ್ಕೆ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು