News Karnataka Kannada
Thursday, May 02 2024
ದೆಹಲಿ

ದೇಶದಲ್ಲಿ ಏಳು ತಿಂಗಳ ಬಳಿಕ ಲಕ್ಷ ದಾಟಿದ ಕೋವಿಡ್ ಪ್ರಕರಣ

Covid 19
Photo Credit :

ಹೊಸದಿಲ್ಲಿ: ಗುರುವಾರ ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಏಳು ತಿಂಗಳ ಬಳಿಕ ಮತ್ತೆ ದೇಶದಲ್ಲಿ ಲಕ್ಷಕ್ಕಿಂತ ಅಧಿಕ ಪ್ರಕರಣ ಒಂದೇ ದಿನ ಪತ್ತೆಯಾಗಿದೆ.

ದೇಶದಲ್ಲಿ ಮೊದಲ ಅಲೆಯಲ್ಲಿ 10 ಸಾವಿರದಿಂದ ಒಂದು ಲಕ್ಷ ಪ್ರಕರಣಗಳಿಗೆ ತಲುಪಲು 103 ದಿನಗಳಾಗಿದ್ದವು. ಎರಡನೇ ಅಲೆಯಲ್ಲಿ ಕೇವಲ 47 ದಿನಗಳಲ್ಲಿ ಈ ಹಂತ ತಲುಪಿತ್ತು. ಅಂದರೆ ಎರಡನೇ ಅಲೆಗಿಂತ ಐದು ಪಟ್ಟು ವೇಗದಲ್ಲಿ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಎರಡನೇ ಅಲೆಯಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ 4 ಲಕ್ಷದ ಗಡಿ ದಾಟಿತ್ತು.

2021ರ ಜೂನ್ 6ರಂದು ಅಂದರೆ 214 ದಿನಗಳ ಹಿಂದೆ ಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಗುರವಾರ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 1,16,964ಕ್ಕೇರಿದೆ. ಇನ್ನೂ ಒಂದು ರಾಜ್ಯದ ವರದಿ ಬರಬೇಕಿದೆ. ಬುಧವಾರ ದೇಶದಲ್ಲಿ 90,889 ಪ್ರಕರಣಗಳು ವರದಿಯಾಗಿದ್ದವು.

ಡಿಸೆಂಬರ್ 28ರ ಬಳಿಕ ಪ್ರಕರಣಗಳ ಸಂಖ್ಯೆ ದಿನಕ್ಕೆ ಶೇಕಡ 35ರ ಸರಾಸರಿ ದರದಲ್ಲಿ ಹೆಚ್ಚಳವಾಗಿದೆ. ಗುರುವಾರ ದಾಖಲಾದ ಸಂಖ್ಯೆ, ಬುಧವಾರದ ಸಂಖ್ಯೆಗಿಂತ ಶೇಕಡ 29ರಷ್ಟು ಅಧಿಕ. ಏಕೈಕ ಧನಾತ್ಮಕ ಅಂಶವೆಂದರೆ ಸಾವಿನ ಸಂಖ್ಯೆ ಕಳೆದ ಕೆಲ ದಿನಗಳಿಂದ ಸ್ವಲ್ಪಮಟ್ಟಿಗೆ ಮಾತ್ರ ಹೆಚ್ಚುತ್ತಿದೆ. ಗುರುವಾರ ದೇಶದಲ್ಲಿ 97 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಒಂದೇ ದಿನ 86 ಸಾವಿರ ಸಕ್ರಿಯ ಪ್ರಕರಣಗಳ ಏರಿಕೆಯೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3.5 ಲಕ್ಷವನ್ನು ದಾಟಿದೆ. ಡಿಸೆಂಬರ್ 21ರಂದು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 75 ಸಾವಿರಕ್ಕಿಂತ ಕೆಳಗಿಳಿದಿತ್ತು. ಡಿಸೆಂಬರ್ 31ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ ಲಕ್ಷದ ಗಡಿ ದಾಟಿದರೆ ಮುಂದಿನ ನಾಲ್ಕು ದಿನಗಳಲ್ಲಿ ಇದು 2 ಲಕ್ಷ ತಲುಪಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು