ಹೈದರಾಬಾದ್:ತೆಲುಗು ನಟ ಮಹೇಶ್ ಬಾಬು ಗೆ ಕೋವಿಡ್ ಸೋಂಕು ತಗುಲಿದ್ದು ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಾವು ತುಂಬಾ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ್ದೇನೆ ಮತ್ತು ಮನೆಯಲ್ಲಿ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.ಯಾರಾದರೂ ಲಸಿಕೆ ಹಾಕದಿದ್ದರೆ ಲಸಿಕೆ ಹಾಕಿಸಿಕೊಳ್ಳುವಂತೆ ಅವರು ಅಭಿಮಾನಿಗಳನ್ನು ಒತ್ತಾಯಿಸಿದರು
ಮಹೇಶ್ ಬಾಬು, ಹೊಸ ವರ್ಷದ ಸಂದರ್ಭದಲ್ಲಿ ತಮ್ಮ ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ಮಕ್ಕಳೊಂದಿಗೆ ದುಬೈನಲ್ಲಿ ಆಚರಿಸಿದರು. ತಮ್ಮ ಫ್ಯಾಮಿಲಿ ಫೋಟೋವನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳು ಮತ್ತು ಹಿಂಬಾಲಕರಿಗೆ ಶುಭ ಹಾರೈಸಿದ್ದರು.
‘ಹೊಸ ಆರಂಭದ ಮ್ಯಾಜಿಕ್ ಅನ್ನು ನಂಬಿರಿ! ಸಂತೋಷವಾಗಿರಿ, ದಯೆಯಿಂದಿರಿ, ಕೃತಜ್ಞರಾಗಿರಿ! ಹೊಸ ವರ್ಷದ ಶುಭಾಶಯಗಳು 2022! ಎಲ್ಲರೂ ಸುರಕ್ಷಿತವಾಗಿರಿ. ನಿಮ್ಮೆಲ್ಲರನ್ನೂ ಪ್ರೀತಿಸಿ’ ಎಂದು ಅವರು ಚಿತ್ರಕ್ಕೆ ಶೀರ್ಷಿಕೆ ನೀಡಿದ್ದರು.