News Karnataka Kannada
Thursday, May 02 2024
ದೆಹಲಿ

ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಒಂದು ವಾರದಲ್ಲಿ ಮೂರು ಪಟ್ಟು ಹೆಚ್ಚಳ

4 new Covid cases reported in Lucknow
Photo Credit :

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದ ಮೂರನೇ ಅಲೆ ಆರಂಭದ ಸೂಚನೆ ಸ್ಪಷ್ಟವಾಗಿ ಕಂಡುಬಂದಿದ್ದು, ಭಾನುವಾರ ಕೊನೆಗೊಂಡ ಒಂದು ವಾರದಲ್ಲಿ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ. ಭಾನುವಾರ ದೇಶದಲ್ಲಿ 33703 ಪ್ರಕರಣಗಳು ವರದಿಯಾಗಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ ಶೇಕಡ 21ರಷ್ಟು ಏರಿಕೆಯಾಗಿದೆ.

ಡಿಸೆಂಬರ್ 27ರಿಂದ ಜನವರಿ 2ರವರೆಗಿನ ಒಂದು ವಾರದಲ್ಲಿ ದೇಶದಲ್ಲಿ 1.3 ಲಕ್ಷ ಹೊಸ ಪ್ರಕರಗಳು ವರದಿಯಾಗಿದೆ. ಇದಕ್ಕೂ ಹಿಂದಿನ ವಾರ 46073 ಪ್ರಕರಣಗಳು ಪತ್ತೆಯಾಗಿದ್ದವು. ಹಿಂದಿನ ವಾರ ದಾಖಲಾದ ಈ ಪ್ರಕರಣಗಳ ಸಂಖ್ಯೆ 2020ರ ಮೇ ತಿಂಗಳ ಬಳಿಕ ಕನಿಷ್ಠ ಎನಿಸಿಕೊಂಡಿತ್ತು.

ಇದು ದೇಶದಲ್ಲಿ ಸಾಂಕ್ರಾಮಿಕ ಆರಂಭವಾದ ಬಳಿಕ ಒಂದು ವಾರದ ಅವಧಿಯಲ್ಲಿ ಆಗಿರುವ ಗರಿಷ್ಠ ಏರಿಕೆಯಾಗಿದೆ. ಇದಕ್ಕೂ ಮುನ್ನ 2021ರ ಏಪ್ರಿಲ್ 5-11ರ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ ಗರಿಷ್ಠ ಎಂದರೆ ಒಂದು ವಾರದಲ್ಲಿ ಶೇಕಡ 71ರಷ್ಟು ಏರಿಕೆಯಾಗಿತ್ತು.

ಶನಿವಾರ ದೇಶದಲ್ಲಿ 2777 ಪ್ರಕರಣಗಳು ವರದಿಯಾಗಿದ್ದವು. ಹಿಂದಿನ ಭಾನುವಾರ ದೇಶದಲ್ಲಿ 6542 ಪ್ರಕರಣ ವರದಿಯಾಗಿತ್ತು. ಒಮೈಕ್ರಾನ್‌ ಪೀಡಿತ ದೇಶಗಳಲ್ಲೂ ಇದೇ ವೇಗದಲ್ಲಿ ಪ್ರಕರಣಗಳ ಏರಿಕೆ ಕಂಡುಬಂದಿದೆ.

ಮಹಾರಾಷ್ಟ್ರದಲ್ಲಿ ಏರಿಕೆ ಗರಿಷ್ಠವಾಗಿದ್ದು, ಒಂದು ವಾರದಲ್ಲಿ 41980 ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ವಾರ ದಾಖಲಾಗಿದ್ದ 8292 ಪ್ರಕರಣಗಳಿಗೆ ಹೋಲಿಸಿದರೆ ಐದು ಪಟ್ಟು ಅಧಿಕ. ಶೇಕಡಾವಾರು ಏರಿಕೆಯಲ್ಲಿ ಬಿಹಾರ ಅಗ್ರಸ್ಥಾನಿಯಾಗಿದ್ದು, ಡಿಸೆಂಬರ್ 20-26 ಅವಧಿಯಲ್ಲಿ ಇಲ್ಲಿ 85 ಪ್ರಕರಣಗಳಷ್ಟೇ ವರದಿಯಾಗಿದ್ದವು. ಆದರೆ ಕಳೆದ ವಾರ 1073 ಪ್ರಕರಣಗಳು ಬೆಳಕಿಗೆ ಬಂದಿದ್ದು, 12 ಪಟ್ಟು ಏರಿಕೆಯಾದಂತಾಗಿದೆ. ಬಂಗಾಳದಲ್ಲಿ ಒಂದು ವಾರದಲ್ಲಿ ಪ್ರಕರಣಗಳ ಸಂಖ್ಯೆ 3550ರಿಂದ 18524ಕ್ಕೇರಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು