ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಹಿನ್ನಲೆಯಲ್ಲಿ ಸಿಎಂ ಅರವಿಂದ್ ಕ್ರೇಜಿವಾಲ್ ಶಾಲೆಗಳಿಗೆ ಒಂದು ವಾರ ರಜೆ ಘೋಷಣೆ ಮಾಡಿದ್ದಾರೆ.
ಇಂದು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ಸೋಮವಾರದಿಂದ ಒಂದು ವಾರದವರೆಗೆ, ಶಾಲೆಗಳು ಭೌತಿಕವಾಗಿ ಮುಚ್ಚಲ್ಪಡುತ್ತವೆ ಅಂತ ಹೇಳಿದರು.
ಕೊರೋನಾ ಹಿನ್ನೆಲೆ ಸರ್ಕಾರಿ ಕಚೇರಿಗಳು ಒಂದು ವಾರದವರೆಗೆ 100% ಸಾಮರ್ಥ್ಯದಲ್ಲಿ ಮನೆಯಿಂದಲೇ (WFH) ಕಾರ್ಯನಿರ್ವಹಿಸುತ್ತವೆ. ಖಾಸಗಿ ಕಚೇರಿಗಳಿಗೆ ಸಾಧ್ಯವಾದಷ್ಟು WFH ಆಯ್ಕೆಗೆ ಹೋಗಲು ಸಲಹೆ ನೀಡಲಾಗುವುದು ಅಂತ ತಿಳಿಸಿದರು.